ಬೆಂಗಳೂರು, ಮೇ 20, ಮಲೇಷ್ಯಾದ ಕೌಲಾಲಂಪುರದಲ್ಲಿ ಸಿಲುಕಿದ್ದ ಕರ್ನಾಟಕದ 60 ಜನರು ಮಂಗಳವಾರ ರಾತ್ರಿ ‘ವಂದೇ ಭಾರತ್ ಮಿಷನ್’ ವಿಶೇಷ ವಿಮಾನದ ಮೂಲಕ ತವರಿಗೆ ವಾಪಸ್ಸಾಗಿದ್ದಾರೆ. ಆದರೆ, ಟಿಕೆಟ್ ದರ ಏರಿಕೆಯ ಕಾರಣ 15 ಜನರು ಪ್ರಯಾಣಿಸದೆ ಅಲ್ಲೇ ಉಳಿದಿದ್ದಾರೆ. ಆಗ್ನೇಯ ಏಷ್ಯಾದಿಂದ ವಂದೇ ಭಾರತ್ ಮಿಷನ್‍ನ ಎರಡನೇ ಹಂತದಲ್ಲಿ ಇದು ಒಂದೇ ವಿಮಾನವಾದ್ದರಿಂದ ಅನೇಕರು ವಿಮಾನದ ಟಿಕೆಟ್‍ಗೆ ಮುಗಿಬಿದ್ದಿದ್ದರು. ಆದರೆ ಪ್ರತಿ ಸೀಟಿಗೆ 33,000 ರೂ.ದರ ಅತಿ ಹೆಚ್ಚು ಕೆಲವರು ದೂರಿದ್ದಾರೆ.
ಕೌಲಾಲಂಪುರ್ ದಲ್ಲಿನ ಭಾರತೀಯ ಧೂತವಾಸ ಕಚೇರಿಗೆ ಕೌಲಾಲಂಪುರದಲ್ಲಿನ ಭಾರತೀಯ ಸಮುದಾಯನೆರವು ಒದಗಿಸಿಕೊಡುವ ಮೂಲಕ ವಿಮಾನ ಏರ್ಪಾಡು ಮಾಡಲು ಸಾಧ್ಯವಾಗಿದೆ. ಏರ್ ಇಂಡಿಯಾದ 1325 ಸಂಖ್ಯೆಯ ವಿಮಾನ ಕೌಲಾಲಂಪುರದಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ಮಂಗಳವಾರ ಸಂಜೆ 6.45 ರ ಸುಮಾರಿಗೆ ಬೆಂಗಳೂರಿಗೆ ಬಂದಿಳಿದಿದೆ. ಕೌಲಾಲಂಪುರದಿಂದ ಆಗಮಿಸಿದ 60 ಜನರನ್ನೂ ತಮ್ಮ ಆಯ್ಕೆಯ ಹೋಟೆಲ್‌ಗಳಿಗೆ ಕರೆದೊಯ್ಯುವ ಮೊದಲು ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿ ಡಾ.ಪ್ರಭು ದೇವ್ ಗೌಡ ತಿಳಿಸಿದ್ದಾರೆ. ಬುಧವಾರ ಬೆಳಿಗ್ಗೆ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಲಾಯಿತು. ಸೋಂಕು ಲಕ್ಷಣ ಇಲ್ಲದ ಪಾಸ್ ಪಡೆದ ನಂತರ ಇತರ ರಾಜ್ಯಗಳಿಗೆ ಪ್ರಯಾಣಿಸಬಹುದಾಗಿದೆ ಡಾ.ಗೌಡ ಹೇಳಿದ್ದಾರೆ.