ರಾಜ್ಯದಲ್ಲಿ 6 ಹೊಸ ಸೋಂಕು ಪ್ರಕರಣ ದೃಡ : ಸಾವಿನ ಸಂಖ್ಯೆ 5 ಕ್ಕೆ ಏರಿಕೆ

ಬೆಂಗಳೂರು,  ಏ 8, ರಾಜ್ಯದಲ್ಲಿ ಇಂದು  ಹೊಸದಾಗಿ  6 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ ಈವರೆಗೆ 181ಕ್ಕೆ ಏರಿಕೆಯಾಗಿದ್ದು  ಈಗಾಗಲೇ 5 ಜನರು  ಸೋಂಕಿನಿಂದ ಮೃತಪಟ್ಟಿದ್ದಾರೆ. ಆರೋಗ್ಯ  ಇಲಾಖೆ ಬಿಡುಗಡೆ ಮಾಡಿರುವ  ಮಾಹಿತಿಯ ಪ್ರಕಾರ   ಉತ್ತರಕನ್ನಡ ಜಿಲ್ಲೆಯಲ್ಲಿ ಒಬ್ಬರಿಗೆ, ಕಲಬುರ್ಗಿಯಲ್ಲಿ ಇಬ್ಬರಿಗೆ, ಮಂಡ್ಯದಲ್ಲಿ ಮತ್ತೊಬ್ಬರಿಗೆ, ಚಿಕ್ಕಬಳ್ಳಾಪುರದಲ್ಲಿ ಒಬ್ಬರಿಗೆ, ಬೆಂಗಳೂರಿನಲ್ಲಿ ಮತ್ತೊಬ್ಬರಿಗೆ ಕೊರೊನಾ ಸೋಂಕು ಖಚಿತವಾಗಿದೆ. ಅಂದಹಾಗೇ ಕಲಬುರ್ಗಿಯಲ್ಲಿ 175ನೇ ಸೋಂಕಿತನಿಂದಾಗಿ ಅವರ ತಾಯಿಗೂ ಕೊರೊನಾ ವೈರಸ್ ಸೋಂಕು ತಗುಲಿದೆ. ಮಂಡ್ಯದಲ್ಲಿ  ಮತ್ತೊಬ್ಬರಿಗೆ ಸೋಂಕು ತಗುಲಿದೆ. ಇನ್ನೂಳಿದಂತೆ ಬೆಂಗಳೂರಿನ ವ್ಯಕ್ತಿಗೆ ದೆಹಲಿ ಪ್ರಯಾಣದ ನಂತರ ಸೋಂಕು ವ್ಯಾಪಿಸಿದೆ  ಒಟ್ಟಾರೆಯಾಗಿ ಇದುವರೆಗೆ ರಾಜ್ಯದಲ್ಲಿ 181 ಜನರಿಗೆ ಕೊರೊನಾ ಸೋಂಕು ತಗುಲಿದ್ದು  ಈಗಾಗಲೇ 5 ಜನರು  ಸಾವನ್ನಪ್ಪಿದ್ದಾರೆ. 28 ಜನರು ಇದರಿಂದ  ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ