ಶೀಘ್ರ ಕೆನಾಲ ಮುಖಾಂತರ ನೀರು ಹಾಯಿಸಲು ಪರೀಕ್ಷೆ: ಶಾಸಕ ಕಾಗೆ

Test to pass water through canal soon: MLA Kage

ಶೀಘ್ರ ಕೆನಾಲ ಮುಖಾಂತರ ನೀರು ಹಾಯಿಸಲು ಪರೀಕ್ಷೆ: ಶಾಸಕ ಕಾಗೆ  

ಸಂಬರಗಿ 16: ಗಡಿ ಭಾಗದ ರೈತರ ಕನಸಾಗಿರುವ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಮೊದಲನೇ ಹಂತದ ಕಾಮಗಾರಿ ಪೂರ್ಣಗೊಂಡು ನೀರಾವರಿ ಯೋಜನೆಗೆ ಅವಶ್ಯಕ ಇರುವ ವಿದ್ಯುತ್ ಸರಬರಾಜು ಕಾಮಗಾರಿ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಕೆನಾಲ ಮುಖಾಂತರ ನೀರು ಹಾಯಿಸಲು ಪರೀಕ್ಷೆ ಮಾಡಲಾಗುವುದೆಂದು ವಾಯುವ್ಯ ರಸ್ತೆ ಸಾರಿಗೆ ಅಧ್ಯಕ್ಷರು ಹಾಗೂ ಕಾಗವಾಡ ಶಾಸಕರು ರಾಜು ಕಾಗೆ ಹೇಳಿದರು.  

ಮದಭಾಂವಿ ಗ್ರಾಮದ ಹೊರ ವಲಯದಲ್ಲಿ ಇರುವ ಮೋರಾರ್ಜಿ ವಸತಿ ಶಾಲೆ ಕಂಪೌಂಡ ಕಾಮಗಾರಿ ಚಾಲನೆ ನೀಡಿ ಮಾತನಾಡಿದರು. ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಪೂರ್ಣಗೊಳಿಸುವ ಭರವಸೆಯ ಮೇಲೆ ನಾನು ಆಯ್ಕೆಯಾಗಿದ್ದೇನೆ. ಆ ಪ್ರಕಾರ ಕಾಮಗಾರಿ ಪೂರ್ಣಗೊಂಡಿದ್ದು ನೀರು ಸರಬರಾಜು ಪರೀಕ್ಷೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.  

ಗಡಿ ಭಾಗದ ಗ್ರಾಮಗಳಲ್ಲಿ ಸರಕಾರದಿಂದ ವಿವಿಧ ಯೋಜನೆ ಅಡಿಯಲ್ಲಿ ಕಾಮಗಾರಿ ಪ್ರಾರಂಭಿಸಿದ್ದು ಅದರಲ್ಲಿ ರಸ್ತೆ, ಶಾಲಾ ಕೊಠಡಿ, ಇನ್ನಿತರ ಕಾಮಗಾರಿ ಕೈಕೊಂಡಿದ್ದು. ನಾನು ಹೇಳಿದಂತ ನಡೆಯುತ್ತೇನೆ. ಆ ಪ್ರಕಾರ ಈ ಯೋಜನೆಯಿಂದ ಶೀಘ್ರದಲ್ಲಿ ನೀರು ಹರಿಸಿ ಬರಗಾಲದ ಗ್ರಾಮಗಳಿಗೆ ಹಸಿರುಕ್ರಾಂತಿ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನನ್ನದು ಒಂದೇ ಗುರಿ, ಪಕ್ಷಾತೀತವಾಗಿ ಕ್ಷೇತ್ರ ಅಭಿವೃದ್ಧಿ ಮಾಡೇ ತೀರುತ್ತೇನೆ. ನಾನು ಸುಳ್ಳು ಹೇಳಿ ದಾರಿ ತಪ್ಪಿಸುವ ವ್ಯಕ್ತಿ ಅಲ್ಲ ಎಂದು ಸ್ಪಷ್ಟಪಡಿಸಿದರು.  

ಮಾಜಿ ಜಿಲ್ಲಾ ಪಂಚಾಯತ ಸದಸ್ಯ ವಿನಾಯಕ ಬಾಗಡಿ, ಪಿ.ಕೆ.ಪಿ.ಎಸ್‌.ಅಧ್ಯಕ್ಷರಾದ ನಿಜಗುಣಿ ಮಗದುಮ್, ಖಂಡೇರಾವ ಘೋರೆ​‍್ಡ, ಸಿದರಾಯ ತೋಡಕರ, ಸಂಜಯ ಅದಾಟೆ, ಅಶೋಕ ಪೂಜಾರಿ, ಅಸ್ಲಮ ಮುಲ್ಲಾ, ಕೃಷ್ಣಾ ಶಿಂಧೆ, ತಾನಾಜಿ ಶಿಂಧೆ, ಸಂಜಯ ಅದಾಟೆ, ಅಶೋಕ ಪೂಜಾರಿ ಹಾಗೂ ಗುತ್ತಿಗೆದಾರರಾದ ಕಲ್ಲಪ್ಪಾ ಮೈಲೂರ ಸೇರದಂತ ಗಣ್ಯರು ಹಾಜರಿದ್ದರು, ಲ್ಯಾಂಡ ಆರ್ಮಿ ಅಭಿಯಂತರರು ಕಾಡೇಶ ಸದಾಶಿವ ಸ್ವಾಗತಿಸಿದರು, ಮಲ್ಲಿಕಾರ್ಜುನ ಕೆಂಪವಾಡೆ ವಂದಿಸಿದರು.