ಗವಿಸಿದ್ಧೇಶ್ವರ ಭಕ್ತಿಗೀತೆ ಧ್ವನಿ ಸುರುಳಿ ಬಿಡುಗಡೆ

Gavisiddheshwara Devotional Audio Roll Released

 ಗವಿಸಿದ್ಧೇಶ್ವರ ಭಕ್ತಿಗೀತೆ ಧ್ವನಿ ಸುರುಳಿ ಬಿಡುಗಡೆ 

ಕೊಪ್ಪಳ 16: ಉತ್ತಮ ಕೃಷಿ ಪ್ರಶಸ್ತಿ ವಿಜೇತ ಹಾಗೂ ಸಮಾಜ ಸೇವಕರಾದ ಕೊಪ್ಪಳ ತಾಲೂಕಿನ ಇರಕಲ್ಲಗಡದ ಗ್ರಾಮದ ವೀರಬಸಪ್ಪ ಪಟ್ಟಣಶೆಟ್ಟಿ ಇವರಿಂದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ರಚಿಸಿದ ಭಕ್ತಿಗೀತೆಯನ್ನು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು. ಮೂಲತಹ ಕೃಷಿಕರಾದ ಇವರು ತಮ್ಮ 83ನೇ ವಯಸ್ಸಿನಲ್ಲಿ ತಾವೇ ಸ್ವತಃ ಸಾಹಿತ್ಯವನ್ನು ರಚಿಸಿ ಹಾಗೂ ಹಾಡುವುದರ ಮೂಲಕ ಗವಿಸಿದ್ದೇಶ್ವರನಿಗೆ ತಮ್ಮ ಸಾಹಿತ್ಯದ ನುಡಿಸೇವೆಯನ್ನು ಸಲ್ಲಿಸಿದ್ದಾರೆ. ಈ ಭಕ್ತಿಗೀತೆಯನ್ನು ಗಾಯಕರಾದ ಬಾಷು ಕಿನ್ನಾಳ ಅವರು ಸಂಗೀತ ಸಂಯೋಜನೆಯೊಂದಿಗೆ ಧ್ವನಿ ಸೇವೆ ಗೈದಿರುತ್ತಾರೆ. ವಿರೇಶಕುಮಾರ ಬೇಟಗೇರಿ ಸಂಕಲಿಸಿರುತ್ತಾರೆ. ಈ ಸಂದರ್ಭದಲ್ಲಿ ಅವರ ಕುಟುಂಬ ವರ್ಗದವರು ಹಾಜರಿದ್ದರು. ಸಾಹಿತ್ಯ ರಚನೆಕಾರರಾದ ಅವರಿಗೆ ಶ್ರೀಗಳು ಆಶೀರ್ವದಿಸಿದರು.