ದೆಹಲಿಯಲ್ಲಿ ಕರೋನಾಸೋಂಕಿಗೆ ಒಳಗಾಗಿದ್ದ ತೆಲಂಗಾಣದ 6 ಮಂದಿ ಸಾವು

ಹೈದರಾಬಾದ್, ಮಾರ್ಚ್ 31, ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮಾರ್ಕಾಜ್‌ನಲ್ಲಿ ನಡೆದ ಧಾರ್ಮಿಕ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿ ಬಳಿಕ   ಕರೋನ ಸೋಂಕಿಗೆ ತುತ್ತಾಗಿದ್ದ  ತೆಲಂಗಾಣದ ಆರು ಜನರು   ಸಾವನ್ನಪ್ಪಿದ್ದಾರೆ.ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮಾರ್ಕಾಜ್ನಲ್ಲಿ ಇದೆ  13 ರಿಂದ 15 ರವರೆಗೆ ನಡೆದ ಧಾರ್ಮಿಕ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವರಲ್ಲಿ   ಕರೋನಾ ಸೋಂಕು  ಹರಡಿದೆ ಎಂದು ಸೋಮವಾರ ತಡರಾತ್ರಿ ತೆಲಂಗಾಣದ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಹೇಳಿಕೆ ತಿಳಿಸಿದೆ. ಅವರಲ್ಲಿ, ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದ  ತೆಲಂಗಾಣದ ಕೆಲವು ವ್ಯಕ್ತಿಗಳಾಗಿದ್ದು  ಇಬ್ಬರು ಗಾಂಧಿ ಆಸ್ಪತ್ರೆಯಲ್ಲಿ, ಅಪೊಲೊ, ಗ್ಲೋಬಲ್ ಆಸ್ಪತ್ರೆ, ನಿಜಾಮಾಬಾದ್ ಮತ್ತು ಗಡ್ವಾಲ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.ವಿಶೇಷ ತಂಡಗಳು ಅವರೊಂದಿಗೆ ಸಂಪರ್ಕಕ್ಕೆ ಬಂದ ಶಂಕಿತ ವ್ಯಕ್ತಿಗಳನ್ನು ಗುರುತಿಸಿದ್ದು, ಅವರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಿ  ವೈದ್ಯಕಿಯ ಪರೀಕ್ಷೆಗೆ ಒಳಪಡಿಸಿ  ಚಿಕಿತ್ಸೆ ನೀಡಲಾಗುತ್ತಿ. ಮಾರ್ಕಾಜ್ ಪ್ರಾರ್ಥನೆಯಲ್ಲಿ ಭಾಗವಹಿಸಿದವರು ಕರೋನಾಗೆ ಕಾರಣವಾಗಿದ್ದರಿಂದ, ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ನಂತರ ಸರ್ಕಾರ ಪರೀಕ್ಷೆಗಳನ್ನು ನಡೆಸಿ ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಿದೆ