ಜಪಾನ್‌ನಲ್ಲಿ 6.3 ತೀವ್ರತೆಯ ಭೂಕಂಪನ

ಟೋಕಿಯೊ, ಜೂನ್ 14, ಜಪಾನ್‌ನ ಕಾಗೋಶಿಮಾ ಪ್ರಾಂತ್ಯದ ಅಮಾಮಿಯೋಶಿಮಾ ದ್ವೀಪದ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 6.3 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ.ಸ್ಥಳೀಯ ಕಾಲಮಾನ ಬೆಳಿಗ್ಗೆ 12.51 ಕ್ಕೆ ಭೂಕಂಪನ ಸಂಭವಿಸಿದ್ದು,  ಅದರ ಕೇಂದ್ರಬಿಂದು ಉತ್ತರಕ್ಕೆ 28.8 ಡಿಗ್ರಿ ಅಕ್ಷಾಂಶದಲ್ಲಿ ಮತ್ತು ಪೂರ್ವಕ್ಕೆ 128.3 ಡಿಗ್ರಿ ರೇಖಾಂಶದಲ್ಲಿ ಮತ್ತು 160 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜಪಾನ್‍ ಭೂಕಂಪನ ತೀವ್ರತೆ ಮಾಪಕದಲ್ಲಿ ದಾಖಲಾಗಿರುವಂತೆ, ಕಾಗೋಶಿಮಾದ ಕೆಲವು ಭಾಗಗಳಲ್ಲಿ ಭೂಕಂಪನ 4 ಬಾರಿ ಸಂಭವಿಸಿದ್ದು, ಕೆಲ ಕಡೆ ತೀವ್ರತೆ 7ರವರೆಗೆ ಏರಿದೆ ಎಂದು ಸಂಸ್ಥೆ ತಿಳಿಸಿದೆ.ಭೂಕಂಪನದಿಂದ ಯಾವುದೇ ಸಾವು-ನೋವು ಇಲ್ಲವೇ ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ. ಭೂಕಂಪನದ ಹಿನ್ನೆಲೆಯಲ್ಲಿ ಸುನಾಮಿ ಅಪಾಯ ಇಲ್ಲವೇ ಮುನ್ನೆಚ್ಚರಿಕೆಯ ಬಗ್ಗೆ ಯಾವುದೇ ಪ್ರಕಟಣೆ ಹೊರಡಿಸಿಲ್ಲ.