ಪಾಟ್ನಾ, ಮೇ 20,ಬಿಹಾರದಲ್ಲಿ ಹೊಸದಾಗಿ54 ಕೊರೊನ ಸೊಂಕು ಪ್ರಕರಣ ವರದಿಯಾಗಿದೆ. ಪರಿಣಾಮ ಈವರೆಗೆ ರಾಜ್ಯದಲಲ್ಲಿ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 1,573 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ತಿಳಿಸಿದ್ದಾರೆ. ಹೊಸ ಪ್ರಕರಣಗಳಲ್ಲಿ 15 ಖಾಗೇರಿಯಾದಿಂದ ವರದಿಯಾಗಿದೆ , ಭಾಗಲ್‌ಪುರದಿಂದ 12, ಬಂಕಾದಿಂದ 11, ಮಧುಬಾನಿ ಮತ್ತು ನಳಂದದಿಂದ ತಲಾ 6, ಸುಪಾಲ್‌ನಿಂದ 2 ಮತ್ತು ಗೋಪಾಲ್‌ಗಂಜ್ ಮತ್ತು ಕತಿಹಾರ್‌ನಿಂದ ತಲಾ 1ಪ್ರಕರಣ ವರದಿಯಾಗಿದೆ. ಹೊಸ ಪ್ರಕರಣಗಳ ಪೈಕಿ 50 ಪುರುಷರು ಮತ್ತು 4 ಮಹಿಳೆಯರೂ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ