ಮಾಸ್ಕೋ, ಜೂನ್ 11,ಮಾಸ್ಕೋದಲ್ಲಿ ಕೊರೊನಾ ವೈರಾಣು ಸೋಂಕಿಗೆ ಕಳೆದ 24 ಗಂಟೆಗಳಲ್ಲಿ 53 ಜನರು ಬಲಿಯಾಗಿದ್ದು ಒಟ್ಟು ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 3,138 ಕ್ಕೆ ಏರಿಕೆಯಾಗಿದೆ ಎಂದು ನಗರ ಕೊರೊನಾ ಪ್ರತಿಕ್ರಿಯಾ ಕೇಂದ್ರದ ಹೇಳಿಕೆ ತಿಳಿಸಿದೆ.53 ಜನರಲ್ಲಿ ನ್ಯುಮೋಣಿಯಾ ಲಕ್ಷಣಗಳು ಕಂಡು ಬಂದಿದ್ದು ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಮಾಹಿತಿ ನೀಡಿದೆ. ಇದಕ್ಕೂ ಒಂದು ದಿನ ಮುನ್ನ 56 ಜನರು ಸೋಂಕಿನಿಂದ ಮೃತಪಟ್ಟಿದ್ದರು.ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸೋಂಕನ್ನು ಸಾಂಕ್ರಾಮಿಕ ಎಂದು ಘೋಷಿತ್ತು. ಈವರೆಗೆ ವಿಶ್ವದ 73 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು 4 ಲಕ್ಷಕ್ಕೂ ಹೆಚ್ಚು ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.