ಮಂದಿರ ನಿರ್ಮಾಣಕ್ಕಾಗಿ ವಕ್ಫ್ ಬೋರ್ಡ್ನಿಂದ 51 ಸಾವಿರ ರೂಪಾಯಿ ದೇಣಿಗೆ

ಲಕ್ನೋ ,ನ 15 :      ಮಹತ್ವದ ಬೆಳವಣಿಗೆಯಲ್ಲಿ,  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಉತ್ತರಪ್ರದೇಶದ ಶಿಯಾ  ವಕ್ಫ್ ಬೋರ್ಡ51 ಸಾವಿರ ರೂಪಾಯಿ ದೇಣಿಗೆ ನೀಡುವುದಾಗಿ ಪ್ರಕಟಿಸಿದೆ.   ಮಂಡಳಿಯ ಅಧ್ಯಕ್ಷ  ವಾಸಿಂ ರಿಝ್ಮಿ ಅವರು ಈ ಬಗ್ಗೆ ಹೇಳಿಕೆ  ನೀಡಿದ್ದು , ಸುಪ್ರೀಂಕೋರ್ಟ್ ತೀಪು ಸಾಧ್ಯವಾದ ರೀತಿಯಲ್ಲಿ  ಉತ್ತಮ ತೀಪು ಎಂದು ಹೇಳಿರುವುದಾಗಿ ವರದಿ ತಿಳಿಸಿದೆ. ಉತ್ತರಪ್ರದೇಶದ ಅಯೋಧ್ಯೆಯ ವಿವಾದ ಸ್ಥಳದಲ್ಲಿಯೇ ರಾಮಮಂದಿರ ನಿರ್ಮಾಣದ ಬಗ್ಗೆ ಸುಪ್ರೀಂಕೋರ್ಟ್ನ ಪಂಚಸದಸ್ಯ ಸಾಂವಿಧಾನಿಕ ಪೀಠ ಸರ್ವಾನುಮತದ ತೀರ್ಪನ್ನು ಪ್ರಕಟಿಸಿತ್ತು. ಅಲ್ಲದೇ  ಮಸೀದಿ ನಿರ್ಮಾಣಕ್ಕಾಗಿ ಪ್ರತ್ಯೇಕವಾಗಿ 5 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಬೋರ್ಡ್ಗೆ ನೀಡಬೇಕು ಎಂದು ಆದೇಶ ಮಾಡಿತ್ತು. ಅಯೋಧ್ಯೆಯಲ್ಲಿ ಬೃಹತ್ ರಾಮಮಂದಿರ ನಿರ್ಮಾಣದ ಕಾರ್ಯ  ನಡೆಯುತ್ತಿದೆ . ರಾಮ ಎಲ್ಲರಿಗೂ ಆದರ್ಶ ಪುರುಷ ಹೀಗಾಗಿ ನಾವು ಸಹ  ರಾಮಮಂದಿರ ನಿರ್ಮಾಣಕ್ಕಾಗಿ  ಸಹಾಯ ಹಸ್ತ ಚಾಚಿ, 51 ಸಾವಿರ ರೂಪಾಯಿ ದೇಣಿಗೆಯನ್ನು ನೀಡುವುದಾಗಿ ಹೇಳಿದ್ದಾರೆ . ಇದಕ್ಕೆ ಅಸ್ಸಾಂನ 21ವಿವಿದ ಮಸ್ಲಿಂ ಸಂಘಟನೆಗಳು ಮಂದಿರ ನಿರ್ಮಾಣ ಮಾಡಲು  5 ಲಕ್ಷರೂಪಾಯಿ ದೇಣಿಗೆ ನೀಡುವುದಾಗಿ ಘೋಷಣೆ  ಮಾಡಿದ್ದವು ನಂತರ ಅದರ ಬೆನ್ನಲ್ಲೇ  ಈಗ ಸುನ್ನಿ ಮಂಡಳಿ   ನೆರವಿನ ಹಸ್ತಚಾಚಿದೆ.ಮಂದಿರ ನಿಮರ್ಾಣಕ್ಕೆ  ಮುಸ್ಲಿಂ ಸಂಘಟನೆಗಳು ಕೈಜೊಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.