ಪಣಜಿ, ನ 05: ಇದೇ 20 ರಿಂದ ಪ್ರಾರಂಭವಾಗುವ 50 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ಸಂದರ್ಭದಲ್ಲಿ ವಿಶೇಷ ಗೋವಾನ್ ವಿಭಾಗದ ಅಡಿಯಲ್ಲಿ ಏಳು ಗೋವಾ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಂಗಳವಾರ ಹೇಳಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ಐಎಫ್ಎಫ್ಐನ ಈ 50 ನೇ ಆವೃತ್ತಿಯಲ್ಲಿ, ಹಿಂದಿನ ಆವೃತ್ತಿಗಳಿಗಿಂತ ಹೆಚ್ಚಿನ ಸಂಖ್ಯೆಯ ಚಲನಚಿತ್ರಗಳನ್ನು ಪ್ರದರ್ಶಿಸಲು ಐನಾಕ್ಸ್ ಪೊವರ್ೊರಿಮ್ನಲ್ಲಿ ಹೆಚ್ಚುವರಿ ಮೂರು ಪರದೆಗಳನ್ನು ಅಳವಡಿಸಲಾಗುವುದು ಎಂದು ಹೇಳಿದ್ದಾರೆ. ಜನಸಾಮಾನ್ಯರ ವೀಕ್ಷಣೆಗಾಗಿ ಮಿರಾಮರ್ ಬೀಚ್ನಲ್ಲಿ ಒಂದು ಪರದೆ ಸ್ಥಾಪಿಸಲಾಗುವುದು, ರವೀಂದ್ರ ಭವನಗಳಲ್ಲಿ ಹಗೂ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಜನಪ್ರಿಯ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ತಿಳಿಸಿದ್ದಾರೆ. ನವದೆಹಲಿಯಲ್ಲಿ ಐಎಫ್ಎಫ್ಐಗಾಗಿ ಸ್ಟೀರಿಂಗ್ ಕಮಿಟಿಯಲ್ಲಿ ಮುಖ್ಯಮಂತ್ರಿ ಸೋಮವಾರ ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರು ಮತ್ತು ಅವರು ವಹಿಸಿದ್ದರು. ನವೆಂಬರ್ 20, 2019 ರಿಂದ ಐಎಫ್ಎಫ್ಐನ ಗೋಲ್ಡನ್ ಜುಬಿಲಿ ಆವೃತ್ತಿಯ ಸಿದ್ಧತೆಗಳನ್ನು ಪರಿಶೀಲಿಸಲು ಈ ಸಭೆ ನಡೆಸಾಲಗಿದೆ.