ಫುಲ್ಬನ್ ಶಾಲೆಯ ವತಿಯಿಂದ 50ನೇ ವರ್ಷದ ಸುವರ್ಣ ಮಹೋತ್ಸವ
ಹೊಸಪೇಟೆ 02: ಇಂದು ವಿಜಯನಗರದ ಜಿಲ್ಲೆಯ ಹೊಸಪೇಟೆಯಲ್ಲಿ ಖಿದ್ ಮತ್ -ಉಲ್ - ಮುಸ್ಲಿಮೀನ್ ಸಂಸ್ಥೆಯ ಫುಲ್ಬನ್ ಶಾಲೆಯ ವತಿಯಿಂದ 50ನೇ ವರ್ಷದ ಸುವರ್ಣ ಮಹೋತ್ಸವ ವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಒಂದು 50ನೇ ವರ್ಷದ ಸುವರ್ಣ ಮಹೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಎಂ.ಎಸ್ ದಿವಾಕರ್ ರವರು ಮಾತನಾಡಿ ಯಾವುದೇ ಒಂದು ಸಮಾಜ ಮುಂದುವರೆಯಬೇಕೆಂದರೆ ಅಥವಾ ಅಭಿವೃದ್ಧಿಯಾಗಬೇಕೆಂದರೆ ಶಿಕ್ಷಣ ಅತ್ಯಾವಶ್ಯಕ ಅದರಲ್ಲೂ ವಿಶೇಷವಾಗಿ ಅಭಿವೃದ್ಧಿ ಆಗಬೇಕೆಂದರೆ ಮಹಿಳೆಯರು ಅತ್ಯಂತ ಹೆಚ್ಚಿನ ದಾಗಿ ವಿದ್ಯಾವಂತರಾಗಬೇಕು ಆಗ ಮಾತ್ರ ಸಮಾಜವನ್ನು ನಿರ್ದಿಷ್ಟ ಗುರಿಯನ್ನು ತಲುಪಲು ಸಾಧ್ಯ ಇಂತಹ ದೂರ ದೃಷ್ಟಿಯನ್ನು ಮುಂದಿಟ್ಟುಕೊಂಡು ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣದ ಶಾಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ 50 ವರ್ಷಗಳನ್ನು ಪೂರೈಸಿರುವುದರಿಂದ ನಿಮ್ಮ ಸಮಾಜದ ಹಿರಿಯ ಮುಖಂಡರು ಗಳಿಗೆ ನನ್ನ ವೈಯಕ್ತಿಕವಾಗಿ ಹಾಗೆ ಸಮಾಜದ ಹಿರಿಯ ಮುಖಂಡರುಗಳ ಪರವಾಗಿ ಅನಂತಾನಂತ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಸುಮಾರು 40 ಮಕ್ಕಳಿಂದ ಶುರುವಾಗಿ ಇಂದು ಒಂದು ಸಾವಿರದ 1900 ಮಕ್ಕಳಿಗೆ ಏರಿರುವುದು ಅತ್ಯಂತ ಸಂತೋಷದಾಯಕ ವಿಷಯವಾಗಿರುತ್ತದೆ. ಇನ್ನು ಮುಂದೆ ಇನ್ನು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಆಗಮಿಸಿ, ಶಾಲೆಯ ಹೆಸರನ್ನು ಅಜರಾಮರವಾಗಿಸಲಿ ಎಂದು ಹಾರೈಸುತ್ತೇನೆ ಎಂದರು.
ನಂತರ ಫುಲ್ ಬನ್ ಶಾಲೆಯ ಉಪಾಧ್ಯಕ್ಷರು ಹಾಗೂ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಅಂಜುಮನ್ ಕಿದ್ಮತೆ ಇಸ್ಲಾಂ ಸಮಿತಿಯ ಅಧ್ಯಕ್ಷರಾದ ಎಚ್. ಎನ್ ಮೊಹಮ್ಮದ್ ನಿಯಾಜಿ ರವರು ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿರುವುದರಿಂದ ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗದೆ ತಂದೆ-ತಾಯಿಗಳ ಹೆಸರು ಅಜರಾಮರವಾಗಿಸುವಂತೆ ವಿದ್ಯಾಭ್ಯಾಸವನ್ನು ಮಾಡಿ ಉನ್ನತ ಹುದ್ದೆಯನ್ನು ಪಡೆಯಬೇಕು ಎಂದು ಕರೆ ನೀಡಿದರು.
ಅದರಲ್ಲೂ ಇತ್ತೀಚಿನ ಯುವಕರು ಮೊಬೈಲ್ ಗೀಳಿಗೆ ಬಲಿಯಾಗಿ ತನು, ಮನ, ಧನ, ಸಮಯ, ವಯಸ್ಸು, ಆರೋಗ್ಯ, ಎಲ್ಲವನ್ನು ಕಳೆದುಕೊಳ್ಳುತ್ತಿದ್ದಾರೆ.
ಆದ್ದರಿಂದ ವಿದ್ಯಾರ್ಥಿಗಳು ಒಳ್ಳೆಯ ಗುರಿ ಹಾಗೂ ಗುರು ಹಿರಿಯರ ಮಾರ್ಗದರ್ಶನ ನಿರಂತರವಾದ ಪ್ರಯತ್ನ ನಿಂದ ಮಾತ್ರ ಉನ್ನತ ಸ್ಥಾನ ಪಡೆಯಲು ಸಾಧ್ಯ ಹಾಗೂ ಆಗ ಮಾತ್ರ ಜನ್ಮ ಕೊಟ್ಟ ತಂದೆ ತಾಯಿಗಳಿಗೆ ವಿದ್ಯಕೊಟ್ಟ ಗುರು ಹಿರಿಯರಿಗೆ ಹಾಗೂ ದೇಶಕ್ಕೆ ಒಳ್ಳೆಯ ಹೆಸರು ಸಾಧ್ಯ ಎಂದರು. ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ನಾನು ಸದಾ ಸಿದ್ಧ ಆಗಿರುತ್ತೇನೆ ಎಂದರು.
ಒಂದು 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಾದ ಶ್ರೀಹರಿಬಾಬು ರವರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚನ್ನಬಸಪ್ಪನವರು, ಹಾಗೂ ಫೋಲ್ ಬನ್ ಶಾಲೆ ಸಂಸ್ಥೆಯ ಅಧ್ಯಕ್ಷರಾದ ಸಯ್ಯದ್ ನಾಜಿಮುದ್ದೀನ್ ಸಹಾಬ್, ಉಪಾದ್ಯಕ್ಷರಾದ ಹೆಚ್ ಎನ್ ಮೊಹಮ್ಮದ್ ಇಮಾಮ್ ನಿಯಾಜಿ ಸಾಬ್, ಶೆಕ್ಷಾವಲಿ, ಕೆ ಮುಸ್ತಾಕ್ ಅಹಮ್ಮದ್, ಬಿ ಎಮ್ ಡಿ ಹನೀಫ್ 65, ಎಮ್ ಹುಸ್ಸೇನ್ ಸಾಬ್, ಕೆ ರಿಯಾಜ್ ಅಹಮ್ಮದ್, ಸಾಬೀರ್ ಹುಸ್ಸೇನ್ 81, ಕೆ ಅಬ್ದುಲ್ ಹಕ್ ಸೇಟ್, ಕೆ ಸಯ್ಯದ್ ಮೊಹಮ್ಮದ್, ಮನ್ಸೂರ್ ಹುಸ್ಸೇನ್ ಎಂ ಬಿ 81, ಫೈರೋಜ್ ಖಾನ್, ಎಂ, ಡಿ ಆಸಿಫ್ ಹುಸ್ಸೇನ್, ಕೆ ಎಂ ಡಿ ಸಲೀಂ ಜಾಫರ್, ಸಯ್ಯದ್ ಎತೆಸಾಮ್ ಸಾಬ್ ,ಹಾಗೂ ಎಲ್ಲಾ ಸದಸ್ಯರು, ಶಾಲೆಯ ಸಿಬ್ಬಂದಿ ವರ್ಗದವರು ಹಾಗೂ ಸಾವಿರಾರು ಜನ ಪಾಲಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.