ಪರೀಕ್ಷಾ ಪೇ ಚರ್ಚೆ ಸಂವಾದಲ್ಲಿ 50 ದಿವ್ಯಾಂಗ ವಿದ್ಯಾರ್ಥಿಗಳು ಭಾಗಿ

ನವದೆಹಲಿ, ಜ, 19 :     ನಾಳೆ ನಡೆಯಲಿರುವ ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ದೇಶದ ವಿವಿಧ ಶಾಲೆಗಳ 50 ದಿವ್ಯಾಂಗ ವಿದ್ಯಾರ್ಥಿಗಳು ಪ್ರಧಾನಿ ಜೊತೆ  ಸಂವಾದ ನಡೆಸಲಿದ್ದಾರೆ.  

ರಾಷ್ಟ್ರ ರಾಜಧಾನಿ ನವದೆಹಲಿಯ ತಾಲ್ಕೊಟರಾ ಕ್ರೀಡಾಂಗಣಲದಲ್ಲಿ   ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮ ನಡೆಯಲಿದೆ. ಪರೀಕ್ಷಾ ಒತ್ತಡದಿಂದ ಹೊರಬರುವ ಬಗ್ಗೆ ಪ್ರಧಾನಿ ಮೋದಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ.

ವಿವಿಧ ರಾಜ್ಯಗಳ ವಿದ್ಯಾರ್ಥಿಗಳಿಗೆ ಈ ಅವಕಾಶ ಸಿಕ್ಕಿದೆ ಎಂದು ಮಾನವ ಸಂಪನ್ಮೂಲ ಇಲಾಖೆ ಸಚಿವಾಲಯದ ಜಂಟಿ ನಿರ್ದೇಶಕಿ ಆರ್ಸ್ ಮೀನಾ ತಿಳಿಸಿದ್ದಾರೆ.  

ಪರೀಕ್ಷಾ ಒತ್ತಡವನ್ನು ನಿಭಾಯಿಸು' ಎಂಬ ಪರಿಕಲ್ಪನೆಯಲ್ಲಿ ಚಿತ್ರಕಲೆ ಸ್ಪರ್ದೇಯನ್ನು ಏರ್ಪಡಿಸಿ, ವಿಶೇಷ ಚೇತನ ಮಕ್ಕಳನ್ನು ಸಂವಾದಕ್ಕೆ ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ಚಿತ್ರಕಲೆಗಳನ್ನು ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮದ ವೇಳೆ ಪ್ರದರ್ಶನಕ್ಕಿಡಲಾಗುತ್ತದೆ.ಕಳೆದ ವರ್ಷ 1.4 ಲಕ್ಷ ವಿದ್ಯಾರ್ಥಿಗಳು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಬಂಧ ಬರೆದಿದ್ದರು.