ನವದೆಹಲಿ, ಮಾ 26,ಕೊರೊನಾ-19 ವೈರಸ್ ಸೋಂಕಿನ ವಿರುದ್ಧದ ಭಾರತದ ಹೋರಾಟ ಮುಂದುವರಿದಿದೆ. ಈ ಮಧ್ಯೆ ಸಂಕಷ್ಟ ಹಾಗೂ ಅಗತ್ಯವಿರುವವರೆಗೆ ನೆರವಾಗಲು ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಅಕ್ಕಿ ನೀಡುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ವಾಗ್ದಾನ ಮಾಡಿದ್ದಾರೆ. ಸುರಕ್ಷತೆ ಮತ್ತು ಭದ್ರತೆಗಾಗಿ ಸರಕಾರಿ ಶಾಲಾಕಟ್ಟದಲ್ಲಿರುವವರೆಗೆ ಸೌರವ್ ಗಂಗೂಲಿ ಮತ್ತು ಲಾಲ್ ಬಾಬೆ ರೈಸ್ ಅವರು ಸಮಾರು 50 ಲಕ್ಷ ರೂ. ಮೌಲ್ಯ ಅಕ್ಕಿಯನ್ನು ಕೊಡುವುದಾಗಿ ಹೇಳಿದ್ದಾರೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. "ಅಗತ್ಯವಿರುವವರಿಗೆ ಉಚಿತ ಅಕ್ಕಿ ನೀಡಲು ಲಾಲ್ ಬಾಬಾ ರೈಸ್ ಅವರೊಂದಿಗೆ ಸೌರವ್ ಗಂಗೂಲಿ, ಸುರಕ್ಷತೆ ಮತ್ತು ಭದ್ರತೆಗಾಗಿ ಸರ್ಕಾರಿ ಶಾಲೆಗಳಲ್ಲಿ50 ಲಕ್ಷ ರೂ. ಮೌಲ್ಯದ ಉಚಿತ ಅಕ್ಕಿ ನೀಡಲು ಮುಂದಾಗಿರುವುದು ಗಮನ ಸೆಳೆಯುತ್ತದೆ. ಗಂಗೂಲಿಯ ಈ ಉಪಕ್ರಮ ರಾಜ್ಯದ ಇತರ ನಾಗರಿಕರಿಗೆ ಸೇವೆ ಸಲ್ಲಿಸಲು ಇದೇ ರೀತಿಯ ಉಪಕ್ರಮಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದು ಭಾವಿಸುತ್ತೇವೆ, ಬಂಗಾಳ ಕ್ರಿಕೆಟ್ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.