ಮೌಂಟ್ ಮಾಂಗಾನುಯಿ, 25 ಭರವಸೆಯ ಬೌಲರ್ ನೀಲ್ ವಾಗ್ನರ್ ಅವರ ಬಿಗುವಿನ ದಾಳಿಗೆ ಮಣಿದ ನ್ಯೂಜಿಲೆಂಡ್ ಇನ್ನಿಂಗ್ಸ್ ಹಾಗೂ 65 ರನ್ ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ, ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಕೊನೆಯ ದಿನವಾದ ಸೋಮವಾರ 3 ವಿಕೆಟ್ ಗೆ 55 ರನ್ ಗಳಿಂದ ಆಟ ಮುಂದುವರಿಸಿದ ಆಂಗ್ಲರು, ಎರಡನೇ ಇನ್ನಿಂಗ್ಸ್ ನಲ್ಲಿ 197 ರನ್ ಗಳಿಗೆ ಆಲೌಟ್ ಆದರು. ಇಂಗ್ಲೆಂಡ್ ತಂಡದ ಅನುಭವಿ ಸ್ಟಾರ್ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವುದನ್ನು ಮರೆತರು. ರೋರಿ ಬನ್ರ್ಸ (31), ಜೊ ಡೆನ್ಲೆ (35), ಬೆನ್ ಸ್ಟೋಕ್ಸ್ (28), ಸ್ಯಾಮ್ ಕರನ್ (29), ಜೋಫ್ರಾ ಅರ್ಚರ್ (30) ರನ್ ಕಲೆ ಹಾಕಿದರೂ, ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ. ಆತಿಥೇಯ ತಂಡದ ಪರ ನೀಲ್ ವಾಗ್ನರ್ 44 ರನ್ ನೀಡಿ 5 ವಿಕೆಟ್ ಉರುಳಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಾಧನೆ ಮಾಡಿದ್ದ ಮಿಚೆಲ್ ಸ್ಯಾಂಟನರ್ ಬೌಲಿಂಗ್ ನಲ್ಲೂ ತಂಡಕ್ಕೆ ನೆರವಾದರು. ಇವರು ಮೂರು ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್ ಇಂಗ್ಲೆಂಡ್ 353, ಎರಡನೇ ಇನ್ನಿಂಗ್ಸ್ 197 ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 9 ವಿಕೆಟ್ ಗೆ 615 (ಡಿಕ್ಲೇರ್)