ಗದಗ, ಮೇ 18,ಗದಗ ಜಿಲ್ಲೆಯಲ್ಲಿ ಮತ್ತೆ ಐದು ಕೊರೋನಾ ಸೋಂಕು ದೃಢಪಟ್ಟಿದೆ.ಶಿರಹಟ್ಟಿಯ 17 ಜನ ಮೇ 12 ರಂದು ತಮಿಳುನಾಡಿನ ಚೆನ್ನೈ ನಿಂದ ಜಿಲ್ಲೆಗೆ ಆಗಮಿಸಿದ್ದರು. ಬಂದ ತಕ್ಷಣವೇ ಅವರೆಲ್ಲರನ್ನೂ ಹಾಸ್ಟೆಲ್ ದಲ್ಲಿ ಪ್ರತ್ಯೇಕ ನಿಗಾದಲ್ಲಿರಿಸಲಾಗಿತ್ತು. ಅವರಲ್ಲಿ ಓರ್ವ ಶಂಕಿತರ ಗಂಟಲು ದ್ರವವನ್ನು ಕೊವಿಡ್-19 ಸೋಂಕು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. 30 ವರ್ಷದ ಪಿ-1178 ಇವರಿಗೆ ಸೋಂಕು ದೃಢಪಟ್ಟಿದೆ.
ಇದಲ್ಲದೇ ಗದಗನ ಕಂಟೇನ್ಮೆಂಟ್ ಝೋನ್ ಗಂಜಿ ಬಸವೇಶ್ವರ ಪ್ರದೇಶ 4 ಜನರಿಗೆ ಪಿ- 1179, 33 ವಯಸ್ಸಿನ ಪುರುಷ, ಪಿ-1180, 58 ವಯಸ್ಸಿನ ಪುರುಷ, ಪಿ- 1181, 32 ವಯಸ್ಸಿನ ಪುರುಷ ಹಾಗೂ ಪಿ-1182, 12 ವಯಸ್ಸಿನ ಗಂಡು ಮಗ ಅವರಿಗೆ ಸೋಂಕು ದೃಢ ಪಟ್ಟಿದ್ದು ನಿಗದಿತ ಕೊವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಜಿ ಬಸವೇಶ್ವರ ಕಂಟೆನ್ಮೆಂಟ್ ವಲಯದ 4 ಹೊಸ ಕೋವಿಡ್-19 ಪ್ರಕರಣದ ಪ್ರಥಮ 20 ಸಂಪರ್ಕಿತರನ್ನು ಈಗಾಗಲೇ ಪ್ರತ್ಯೇಕ ನಿಗಾದಲ್ಲಿ ಇರಿಸಿ ಅವರ ಗಂಟಲು ದ್ರವದ ಪರೀಕ್ಷೆಗಾಗಿ ಕ್ರಮ ಜರುಗಿಸಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಈಗ ಒಟ್ಟು 11 ಪಾಸಿಟಿವ್ ಪ್ರಕರಣಗಳಿಗೆ ಗದಗ ನಿಗದಿತ ಕೊವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗದಗ ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ ಪಾಸಿಟಿವ್ ಹೊಂದಿರುವ 17 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಓಬ್ಬರು ಮೃತಪಟ್ಟಿದ್ದು 5 ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.