ಪೂರ್ವ ಇಂಡೋನೇಷ್ಯಾದಲ್ಲಿ 5.9 ತೀವ್ರತೆಯ ಭೂಕಂಪ

 ಜಕಾರ್ತಾ. ಮಾರ್ಚ್ 27 (ಕ್ಸಿನ್ಹುವಾ) ಇಂಡೋನೇಷ್ಯಾದ ಪೂರ್ವ ಪಪುವಾ ಪ್ರಾಂತ್ಯದಲ್ಲಿ ಶುಕ್ರವಾರ ಬೆಳಗಿನ ಜಾಲ ಪ್ರಬಲ ಭೂಕಂಪ ಸಂಭವಿಸಿದೆ.ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.9 ರಷ್ಟು ದಾಖಲಾಗಿತ್ತು ಎಂದು ಅಲ್ಲಿನ ಹವಾಮಾನ ಮತ್ತು ಭೌಗೋಳಿಕ ಭೌತಿಕ ಕೇಂದ್ರ ತಿಳಿಸಿದೆ. ಪ್ರಬಲ ಭೂಕಂಪವಾಗಿದ್ದರೂ ಸುನಾಮಿ ಅಪಾಯ ಇಲ್ಲ ಎಂದು ಕೇಂದ್ರ ಹೇಳಿದೆ.
ಜಕಾರ್ತಾ ಸ್ಥಳೀಯ ಕಾಲಮಾನ ಶುಕ್ರವಾರ ಬೆಳಗ್ಗೆ 4.36 ಕ್ಕೆ ಜಯಪುರ ಜಿಲ್ಲೆಯ 72 ಕಿಲೋಮೀಟರ್ ವಾಯವ್ಯದಲ್ಲಿ 11 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ಕೇಂದ್ರ ತಿಳಿಸಿದೆ. ಇಂಡೋನೇಷ್ಯಾ ಆಗ್ಗಾಗ್ಗೆ ಪ್ರಬಲ ಭೂಕಂಪಗಳಿಗೆ ತುತ್ತಾಗುತ್ತಿರುತ್ತದೆ.
 
-