47ನೇ ನೂತನ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ಶರದ್ ಅರವಿಂದ್ ಬೋಬ್ಡೆ ಪ್ರಮಾಣವಚನ

ನವದೆಹಲಿ, ನ 18 :     ಸುಪ್ರೀಂ ಕೋರ್ಟ್ನ  47ನೇ ನೂತನ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ಶರದ್ ಅರವಿಂದ್ ಬೋಬ್ಡೆ ಸೋಮವಾರ  ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ರಾಂನಾಥ್ ಕೋವಿಂದ್ ಅವರು ನೂತನ ಮುಖ್ಯನ್ಯಾಯಮೂರ್ತಿಯವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಅವರ ಅಧಿಕಾರವಧಿ  18 ತಿಂಗಳಾಗಿದೆ. ಅಯೋಧ್ಯೆ ವಿವಾದದ ಕುರಿತು ಐತಿಹಾಸಿಕ ತೀಪು ನೀಡಿದ್ದ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶ   ರಂಜನ್ ಗೋಗೊಯಿ ಅವರು ಭಾನುವಾರ ನಿವೃತ್ತಿ ಹೊಂದಿದ್ದಾರೆ.