ಬೆಂಗಳೂರು, ಮೇ 12,ಬಾಗಲಕೋಟೆಯಲ್ಲಿ 15, ಹಾಸನದಲ್ಲಿ 5, ಧಾರವಾಡದಲ್ಲಿ 9 ಕೊರೋನಾ ಸೋಂಕಿತ ಪ್ರಕರಣಗಳು ಸೇರಿ ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾಹ್ನದವರೆಗೆ ಒಟ್ಟು 42 ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಮತ್ತಿಬ್ಬರಿಗೆ ಸೋಂಕು ದೃಢವಾಗಿದೆ. ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 80 ವರ್ಷದ ವೃದ್ಧೆಗೆ ಈಗಾಗಲೇ ಸೋಂಕು ದೃಢವಾಗಿದ್ದು, ಇವರ ಸಂಪರ್ಕದಿಂದ ಇಬ್ಬರಿಗೆ ಸೋಂಕು ಬಂದಿದೆ. 20 ವರ್ಷದ ಪುರುಷ ಹಾಗೂ 50 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಇಬ್ಬರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನವರಾಗಿದ್ದಾರೆ.
ಬಳ್ಳಾರಿಯಲ್ಲಿ 30 ವರ್ಷದ ವ್ಯಕ್ತಿ, ಚಿಕ್ಕಬಳ್ಳಾಪುರದ 46 ವರ್ಷದ ವ್ಯಕ್ತಿ, ಕಲಬುರಗಿಯ 55 ವರ್ಷದ ವ್ಯಕ್ತಿ, ಯಾದಗಿರಿಗೆ ಗುಜರಾತ್ ನ ಅಹಮದಾಬಾದ್ ಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳ 33 ವರ್ಷದ ಮಹಿಳೆ ಮತ್ತು 38 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಮುಂಬೈ, ಮಹಾರಾಷ್ಟ್ರಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳ 28 ವರ್ಷದ ವ್ಯಕ್ತಿ, ಬಾಗಲಕೋಟೆಯಲ್ಲಿ ಅಹಮದಾಬಾದ್ ಗೆ ಪ್ರಯಾಣಬೆಳೆಸಿದ ಹಿನ್ನೆಲೆಯುಳ್ಳ 16, 14 ವರ್ಷದ ಬಾಲಕರು, 33,21,19 ವರ್ಷದ ಯುವಕರು, 19,34 ವರ್ಷದ ವ್ಯಕ್ತಿಗಳು, 30, 17, 32, 20, 18, 29 ವರ್ಷದ ವ್ಯಕ್ತಿಗಳು ಮತ್ತು 80 ವರ್ಷದ ವೃದ್ಧರಿಗೆ ಸೋಂಕು ತಗಲಿದೆ.
ಅಹಮದಾಬಾದ್ ಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳ 55, 31, 25, 70, 26, 18, 19, 20, 27 ವರ್ಷದ ವ್ಯಕ್ತಿಗಳಿಗೆ ಸೋಂಕು ತಗುಲಿದೆ. ಬೆಂಗಳೂರು ನಗರದ 38 ವರ್ಷದ ಇಬ್ಬರು ಮಹಿಳೆಯರು, ಬೀದರ್ ನ 23, 30 ವರ್ಷದ ವ್ಯಕ್ತಿಗಳು, ಹಾಸನದ 07 ವರ್ಷದ ಬಾಲಕಿ, 4 ವರ್ಷದ ಬಾಲಕಿ 36 ಮತ್ತು 45 ವರ್ಷದ ಮಹಿಳೆಯರಿಗೆ ಕೂಡ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 904ಕ್ಕೇರಿಕೆಯಾಗಿದೆ. ಒಟ್ಟು 32 ಜನರು ಮೃತಪಟ್ಟಿದ್ದು, 426 ಜನರು ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ.