ಮಾಸ್ಕೋ, ಜೂನ್ 13,ಕಳೆದ 24 ಗಂಟೆಗಳಲ್ಲಿ ಬ್ರೆಜಿಲ್‌ನಲ್ಲಿ ಕರೋನ ಸೋಂಕಿನಿಂದ 909 ಜನರು ಮೃತಪಟ್ಟಿದ್ದು ಪರಿಣಾಮ ಈವರೆಗೆ ದೇಶದಲ್ಲಿ ಮೃತರ ಸಂಖ್ಯೆ 41,828 ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.ಇದೆ ಅವಧಿಯಲ್ಲಿ, ದೃಡಪಡಿಸಿದ ಪಡಿಸಿದ ಪ್ರಕರಣಗಳ ಸಂಖ್ಯೆ 25,982 ರಿಂದ 828 810 ಕ್ಕೆ ಏರಿಕೆಯಾಗಿದೆ. ಒಂದು ದಿನದ ಹಿಂದೆ, ಬ್ರೆಜಿಲ್ ನಲ್ಲಿ 30,412 ಹೊಸ ಪ್ರಕರಣಗಳು ಮತ್ತು 1,239 ಹೊಸ ಸಾವು-ನೋವುಗಳು ವರದಿಯಾಗಿತ್ತು .ಅಮೆರಿಕ ನಂತರ ಜಾಗತಿಕ ಮಟ್ಟದಲ್ಲಿ ಕರೋನ ಸೋಂಕು ಪ್ರಕರಣಗಳ ಪೈಕಿ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ -19 ಏಕಾಏಕಿ ಸಾಂಕ್ರಾಮಿಕ ರೋಗ ಎಂದು ಘೋಷಿಸಿತು. ಇಲ್ಲಿಯವರೆಗೆ, ವಿಶ್ವಾದ್ಯಂತ 7.6 ದಶಲಕ್ಷಕ್ಕೂ ಹೆಚ್ಚು ಜನರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ, 4 ಲಕ್ಷ 24,000 ಕ್ಕೂ ಹೆಚ್ಚು ಸಾವು ವರದಿಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ