4 ಕಂಟ್ರಿ ಪಿಸ್ತೂಲ್ ಪತ್ತೆ: ಜಮೀನು ಮಾಲೀಕ ದೂರು

ಬೆಳಗಾವಿ : ಹಳೆಯದಾದ 4 ಕಂಟ್ರಿ ಪಿಸ್ತೂಲ್ಗಳು ತಾಲೂಕಿನ ವಾಘವಡೆ ಗ್ರಾಮದ ಹೊರವಲಯದ ಜಮೀನಿನಲ್ಲಿ ಪತ್ತೆಯಾಗಿದ್ದು, ಈ ಪಿಸ್ತೂಲ್ಗಳನ್ನು ಪತ್ರಕತರ್ೆ ಗೌರಿ ಲಂಕೇಶ ಅವರ ಹತ್ಯೆಗೆ ಬಳಸಲಾಗಿದೆಯಾ ಅಥವಾ ಖಾನಾಪೂರ ಅರಣ್ಯ ಪ್ರದೇಶದ ಪ್ರಾಣಿಗಳ ಬೇಟೆಗೆ ಬಳಸಲಾಗಿದೆಯಾ ಎನ್ನುವ ಅನುಮಾನಗಳು ನಾಗರಿಕರಲ್ಲಿ ಹುಟ್ಟುಹಾಕುತ್ತಿವೆ. 

ತಾಲೂಕಿನ ವಾಘವಡೆ ಗ್ರಾಮದ ವಲಯದ ಬಾವುಕನ್ನಾ ಪಾಟೀಲ ಎಂಬವರ ಜಮೀನಿನಲ್ಲಿ ಈ 4 ಕಂಟ್ರಿ ಪಿಸ್ತೂಲ್ಗಳು ಕಾಣಿಸಿಕೊಂಡಿವೆ. ಇವು ಸುಮಾರು 20ರಿಂದ 30 ವರ್ಷಗಳ ಹಿಂದೆ ತಯಾರಾಗಿರುವ ಪಿಸ್ತೂಲ್ಗಳು ಎಂದು ಹೇಳಲಾಗುತ್ತಿದೆ. ಇವು ಇಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಭಾಗದ ನಾಗರಿಕರಲ್ಲಿ ಹಲವು ಅನುಮಾನಗಳಿಗೂ ಕಾರಣವಾಗಿದ್ದು. ಪತ್ರಕತರ್ೆ ಗೌರಿ ಲಂಕೇಶ್ ಹತ್ಯೆಗೆ ಬಳಕೆ ಮಾಡಲಾಗಿದೆಯಾ ಅಥವಾ ಖಾನಾಪೂರ ತಾಲೂಕಿನಲ್ಲಿ ಅರಣ್ಯ ಪ್ರದೇಶದಲ್ಲಿನ ಪ್ರಾಣಿಗಳ ಬೇಟೆಗೆ ಬಳಕೆ ಮಾಡಲಾಗಿತ್ತೋ ಎನ್ನುವ ಅನುಮಾನಗಳು ನಾಗರಿಕರಲ್ಲಿ ಕಾಡುತ್ತಿವೆ ಎನ್ನಲಾಗಿದೆ.

ತಮ್ಮ ಜಮೀನಿನಲ್ಲಿ 4 ಪಿಸ್ತೂಲ್ಗಳು ದೊರೆತಿರುವ ಹಿನ್ನೆಲೆಯಲ್ಲಿ ಜಮೀನಿನ ಮಾಲಿಕರಾದ ಬಾವುಕನ್ನಾ ಪಾಟೀಲ ಅವರು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ಭಾರತೀಯ ಸಶಸ್ತ್ರ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಪಿಸ್ತೂಲ್ಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸ್ ಆಯುಕ್ತ ಬಿ. ಎಸ್ ಲೋಕೇಶಕುಮಾರ್ ಅವರು ಮಾಹಿತಿ ನೀಡಿದ್ದು, ಇವು ಬಹಳ ಹಳೆಯ ಪಿಸ್ತೂಲ್ಗಳಾಗಿವೆ. ಇನ್ನು ಯಾರೋ ಆರೋಪಿಗಳು ಬಳಸಿದ್ದರೆ ಪಿಸ್ತೂಲ್ಗಳನ್ನು ಬೀಸಾಕಿ ಹೋಗುತ್ತಿರಲಿಲ್ಲ. ಆದ್ದರಿಂದ ಇವುಗಳನ್ನು ಯಾವುದಕ್ಕೆ ಬಳಸಲಾಗಿದೆ ಎಂಬ ಕುರಿತು ತನಿಖೆ ಬಳಿಕವಷ್ಟೇ ತಿಳಿಯಲಿದೆ ಎಂದು ತಿಳಿಸಿದ್ದಾರೆ. 

ತಾಲೂಕಿನ ಅರಣ್ಯ ಪ್ರದೇಶದಲ್ಲಿಯೇ ಪತ್ರಕತರ್ೆ ಗೌರಿ ಲಂಕೇಶ ಹತ್ಯೆಗೆ ಆರೋಪಿಗಳು ತರಬೇತಿ ಪಡೆದಿದ್ದರು. ಈ ಹತ್ಯೆಗೆ ಏನಾದರು ಈ ಪಿಸ್ತೂಲ್ಗಳನ್ನು ಬಳಲಾಗಿತ್ತೋ ಅಥವಾ ಬೇಟೆಗಾರರು ಪ್ರಾಣಿಗಳ ಬೇಟೆಗೆ ಬಳಿಸಿದ್ದಾರೆ ಎನ್ನುವದು ಇನ್ನು ಸ್ಪಷ್ಟವಾಗಬೇಕಿದೆ. ಪಿಸ್ತೂಲ್ಗಳು ದೊರೆತಿರುವ ವಾಘವಡೆ ಗ್ರಾಮವು ಪತ್ರಕತರ್ೆ ಗೌರಿ ಲಂಕೇಶ ಅವರ ಹತ್ಯೆಯ ಆರೋಪಿಗಳು ತರಬೇತಿ ಪಡೆದಿದ್ದರು ಎನ್ನಲಾದ ಚಿಕಲೆ ಗ್ರಾಮದಿಂದ ಸುಮಾರು 30 ಕಿ.ಮೀ. ಅಂತರದಲ್ಲಿದೆ. ಇವೇಲ್ಲ ಇಲ್ಲಿ ದೊರೆತಿರುವ 4 ಕಂಟ್ರಿ ಪಿಸ್ತೂಲ್ಗಳು ಯಾವ ಘಟನೆಗೆ ಬಳಕೆಯಾಗಿವೆ ಎಂಬ ಸತ್ಯಾಸತ್ಯೆತೆಯು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.