ರಷ್ಯಾದ ಕಮ್ಚಟ್ಕಾ ದ್ವೀಪ ಪ್ರದೇಶದಲ್ಲಿ 4.9 ತೀವ್ರತೆಯ ಭೂಕಂಪ

ಪೆಟ್ರೋಪ್ಲವೋಸ್ಕ್ – ಕಮ್ಚಟ್ಕಸ್ಕೈ, ಮೇ 18, ರಷ್ಯಾದ ಕಮ್ಚಟ್ಕಾ ದ್ವೀಪ ಪ್ರದೇಶದ ಪೂರ್ವ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ ಎಂದು ರಷ್ಯಾ ವಿಜ್ಞಾನ ಕೇಂದ್ರದ ಭೌಗೋಳಿಕ ಭೌತಿಕ ಕೇಂದ್ರ ಸೋಮವಾರ ತಿಳಿಸಿದೆ.ರಷ್ಯಾ ಸ್ಥಳೀಯ ಕಾಲಮಾನ ಸೋಮವಾರ ಬೆಳಗಿನ ಜಾವ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.9 ರಷ್ಟು ದಾಖಲಾಗಿತ್ತು. ಪೆಸಿಫಿಕ್ ಸಾಗರದಲ್ಲಿ 25 ಕಿಲೋಮೀಟರ್ ಆಳದಲ್ಲಿ, ಪೆಟ್ರೋಪವ್ಲೋಸ್ಕ್ – ಕಮ್ಚಟ್ಸ್ಕೈ ದಿಂದ 130 ಕಿಲೋಮೀಟರ್ ಆಗ್ನೇಯದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ಇಲಾಖೆ ತಿಳಿಸಿದೆ. ಸ್ಥಳೀಯ ನಿವಾಸಿಗಳಿಗೆ ಭೂಕಂಪದ ಅನುಭವವಾಗಿಲ್ಲ. ಭೂಕಂಪದಿಂದ ಯಾವುದೇ ಸಾವು  - ನೋವು ಸಂಭವಿಸಿಲ್ಲ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಭೂಕಂಪ ಹೆಚ್ಚು ಸಕ್ರಿಯವಾಗಿರುವ ಪ್ರದೇಶದಲ್ಲಿ ಕಮ್ಚಟ್ಕಾ ಪ್ರದೇಶವಿದ್ದು ಅಲ್ಲಿ ಆಗ್ಗಾಗ್ಗೆ ಭೂಕಂಪಗಳು ಸಂಭವಿಸುತ್ತಿರುತ್ತದೆ.