ಕೈರೋ, ಮಾರ್ಚ್ 24 (ಸ್ಪುಟ್ನಿಕ್) ಈಜಿಪ್ಟ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 39 ಕರೋನ ಸೋಂಕಿನ ಪ್ರಕರಣ ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ಪ್ರಕಟಿಸಿದೆ. ಪರಿಣಾಮ ದೇಶದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಈಗ 366 ಕ್ಕೆ ತಲುಪಿದೆ.ಕರೋನವೈರಸ್ ಕುರಿತು ಹೊಸ ಅಂಕಿ ಅಂಶಗಳನ್ನು ಸಚಿವಾಲಯದ ವಕ್ತಾರ ಖಲೀದ್ ಮುಗಾಹೆಡ್ ಬಹಿರಂಗಪಡಿಸಿದ್ದಾರೆ.
ಸಚಿವಾಲಯದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಕೊವಿಡ್ -19 ರೋಗನಿರ್ಣಯ ಮಾಡಿದವರಲ್ಲಿ, ಯಾವುದೆ ವಿದೇಶಿ ನಾಗರಿಕರಿಲ್ಲ; ಈ ರೋಗವು ಈಜಿಪ್ಟಿನವರಲ್ಲಿ ಕಂಡುಬಂದಿದೆ, ಅವರು ಈ ಹಿಂದೆ ವೈರಸ್ ಸೋಂಕಿತ ಜೊತೆ ಸಂಪರ್ಕದಲ್ಲಿದ್ದರು. ಕಳೆದ ದಿನದಿಂದ ಐವರು ಸೋಂಕಿನಿಂದ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಈಗ 19 ಕ್ಕೆ ಏರಿಕೆಯಾಗಿದೆ 68 ಜನರು ಸೋಂಕಿನಿಂದ ಪೂರ್ಣ ಗುಣಮುಖರಾಗಿದ್ದಾರೆ ಎಂದೂ ಮುಗಾಹೇದ್ ಹೇಳಿದ್ದಾರೆ.