ಬೆಳಗಾವಿ: ಜುಲೈ 26 :(ಕನರ್ಾಟಕ ವಾತರ್ೆ): "ಬೆಳಗಾವಿ ವಿಮಾನ ನಿಲ್ದಾಣದ ಒಟ್ಟಾರೆ ಅಭಿವೃದ್ಧಿಗಾಗಿ ಇನ್ನೂ 37.40 ಎಕರೆ ಭೂಮಿ ಒದಗಿಸುವಂತೆ ವಿಮಾನ ನಿಲ್ದಾಣ ಪ್ರಾಧಿಕಾರವು ಬೇಡಿಕೆ ಸಲ್ಲಿಸಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ(ಜುಲೈ 25) ಸಭೆ ನಡೆಸಿದ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರು, ಬೆಳಗಾವಿ ವಿಮಾನ ನಿಲ್ದಾಣಕ್ಕಾಗಿ ಇದುವರೆಗೆ ಒಟ್ಟು ಎಷ್ಟು ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಹಾಗೂ ಎಷ್ಟು ಪರಿಹಾರ ವಿತರಣೆ ಮಾಡಲಾಗಿದೆ ಎಂಬುದರ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಭೂಸ್ವಾಧೀನ ಹಾಗೂ ಪರಿಹಾರ ವಿತರಣೆಯ ಬಗ್ಗೆ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸವರ್ೆ ನಂಬರ್ ಪ್ರಕಾರ ಸಮಗ್ರ ವರದಿ ನೀಡಬೇಕು ಎಂದರು.
ವಿಮಾನ ನಿಲ್ದಾಣ ಅಭಿವೃದ್ಧಿಗೆ ಸಕರ್ಾರ ಈಗಾಗಲೇ 370 ಎಕರೆ ಜಮೀನು ನೀಡಿದೆ. ಇದರಲ್ಲಿ ವಿಮಾನ ನಿಲ್ದಾಣದ ಪಶ್ಚಿಮ ಭಾಗದಲ್ಲಿರುವ ಜಮೀನು ಇನ್ನೂ ಹಸ್ತಾಂತರಿಸಿಲ್ಲ; 14 ಎಕರೆ ಜಮೀನು ವಾಯುಸೇನೆಯ ಕಬ್ಜಾದಲ್ಲಿದೆ. ಇದಲ್ಲದೇ ಸ್ಮಶಾನಭೂಮಿ ಹಾಗೂ ಗ್ರಾಮಸ್ಥರಿಗೆ ರಸ್ತೆಗಾಗಿ ಜಮೀನು ಬಿಟ್ಟುಕೊಟ್ಟಿರುವುದರಿಂದ ವಿಮಾನ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಭೂಮಿಯ ಕೊರತೆಯಾಗಿದೆ ಬೆಳಗಾವಿ ವಿಮಾನ ನಿಲ್ದಾಣದ ನಿದರ್ೇಶಕ ರಾಜೇಶಕುಮಾರ್ ಮೌರ್ಯ ಸಭೆಯಲ್ಲಿ ವಿವರಿಸಿದರು.