ದಕ್ಷಿಣ ಕೊರಿಯಾದಲ್ಲಿ 334 ಹೊಸ ಕೋವಿದ್ -19 ಪ್ರಕರಣಗಳು ಪತ್ತೆ

ಸಿಯೋಲ್, ಫೆ 27;    ದಕ್ಷಿಣ ಕೊರಿಯಾದಲ್ಲಿ ಕೋವಿದ್ -19 ಸೋಂಕಿನ 334 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1595ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ 12 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇಲ್ಲಿನ ಡಯಾಗು ಮತ್ತು ಉತ್ತರ ಜಿಯೋಂಗ್ ಸ್ಯಾಂಗ್ ಪ್ರಾಂತ್ಯದಲ್ಲಿ ಅತಿ ಹೆಚ್ಚು ಸೋಂಕು ತಗುಲಿರುವುದು ವರದಿಯಾಗಿದೆ. ಚೀನಾ ಹೊರತುಪಡಿಸಿದರೆ, ದಕ್ಷಿಣ ಕೊರಿಯಾ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರವಾಗಿದೆ.