ಪಣಜಿ, ಮೇ 24, ದೇಶದ ನಾನಾ ಭಾಗಳಲ್ಲಿ ಸಿಲುಕಿಕೊಂಡಿದ್ದ 30,134 ವಲಸೆ ಕಾರ್ಮಿಕರು ಶ್ರಮಿಕ್ ರೈಲುಗಳ ಮೂಲಕ ಈಗಾಗಲೇ ತಮ್ಮ ಊರುಗಳಿಗೆ ಮರಳಿದ್ದಾರೆ. ಒಡಿಶಾ ಮತ್ತು ಜಾರ್ಖಂಡ್‌ನ ವಲಸೆ ಕಾರ್ಮಿಕರು ಎರಡು ಶ್ರಮಿಕ್ ಎಕ್ಸ್‌ಪ್ರೆಸ್ ರೈಲುಗಳ ಮೂಲಕ ತಮ್ಮ ಊರುಗಳಿಗೆ ಮರಳಿದ್ದಾರೆ.ಒಡಿಶಾದ ಭವಾನಿ ಪಟ್ನಾ ಮತ್ತು ಜಾರ್ಖಂಡ್‌ನ ಜಾಸಿಡಿಹ್‌ಗೆ ಎರಡು ರೈಲಿನಲ್ಲಿ 3265 ವಲಸೆ ಕಾರ್ಮಿಕರು ಗೋವಾದ ಕರ್ಮಾಲಿಯಿಂದ ನಿನ್ನೆ ಹೊರಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕರೋನ ಕಾರಣ, ಮತ್ತು ರಾಷ್ಟ್ರವ್ಯಾಪಿ ಲಾಕ್ ಡೌನ್ ಕಾರಣದಿಂದ ಬೇರೆ ಊರುಗಳಿಗೆ ಹೋಗಲಾಗದ ವಲಸೆ ಕಾರ್ಮಿಕರರು ಈಗ ಶ್ರಮಿಕ್ ರೈಲಗಳು ಮೂಲಕ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಎರಡೂ ರೈಲುಗಳಲ್ಲಿ ಕಾರ್ಮಿಕರು ಹೊರಡುವ ಮೊದಲು ಎಲ್ಲ ಕಾರ್ಮಿಕರನ್ನು ವೈದ್ಯಕೀಯ ತಪಾಸಣೆ ಮತ್ತು ಇತರ ವಿಧಿವಿಧಾನಗಳನ್ನು ನಡೆಸಲಾಯಿತು.ಉತ್ತರ ಗೋವಾ ಜಿಲ್ಲಾ ಮ್ಯಾಜಿಸ್ಟ್ರೇಟ್, ಆರ್ ಮೇನಕಾ, ಹಾಗೂ ಹಿರಿಯ ಐಎಎಸ್,ಅಧಿಕಾರಿ ಕುನಾಲ್ ಮೇಲ್ವಿಚಾರಣೆಯಲ್ಲಿ ಇಡೀ ಕಾರ್ಯಾಚರಣೆಯನ್ನು ನಡೆಸಲಾಯಿತು .