ಚನ್ನವೀರ ಶರಣರ 30ನೇ ಪುಣ್ಯಸ್ಮರಣೋತ್ಸವ

30th commemoration of Channaveera Sharan

ಚನ್ನವೀರ ಶರಣರ 30ನೇ ಪುಣ್ಯಸ್ಮರಣೋತ್ಸವ  

ಹುಬ್ಬಳ್ಳಿ  14: ಗದಗ ಜಿಲ್ಲಾ ಬಳಗಾನೂರ ಸುಕ್ಷೇತ್ರದ ಮೌನಯೋಗಿ ಚಿಕೇನಕೊಪ್ಪದ   ಚನ್ನವೀರ ಶರಣರ 30ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಧರ್ಮ ಚಿಂತನಗೋಷ್ಟಿ ಆಧ್ಯಾತ್ಮ ಪ್ರವಚನ ಚಿಕೇನಕೊಪ್ಪದ   ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮದಲ್ಲಿ ಅಯೋಜಿಸಲಾಗಿತ್ತು. ಗದಗ ಜಿಲ್ಲಾ ಬಳಗಾನೂರ ಸುಕ್ಷೇತ್ರ ಪರಮಪೂಜ್ಯ   ಶಿವಶಾಂತವೀರ ಶರಣರು ಅವರಿಗೆ ಹಾಗೂ ಖ್ಯಾತ ಪ್ರವಚನಕಾರರು, ನಾಡಿನ ಹೆಸರಾಂತ ಅನುಭಾವಿಗಳಾದ, ಮುಧೋಳ ರನ್ನಬೆಳಗಲಿ   ಸಿದ್ದಾರೂಢ ಮಠ ಶಿವಯೋಗಾಶ್ರಮದ ಪರಮ ಪೂಜ್ಯ   ಸಿದ್ದರಾಮ ಶಿವಯೋಗಿ ಸ್ವಾಮಿಜಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ  ವತಿಯಿಂದ ಶ್ರದ್ಧಾ, ಭಕ್ತಿಯಿಂದ ಮಾಲಾರೆ​‍್ಣ ಮಾಡಿ, ಗ್ರಂಥ ನೀಡಿ ಹೃದಯಪೂರ್ವಕ ಗೌರವ ನಮನಗಳನ್ನು ಸಲ್ಲಿಸಲಾಯಿತು.  ದರ್ಶನ ಆಶೀರ್ವಾದ ಪಡೆದರು. ಆಧ್ಯಾತ್ಮ ಜೀವಿಗಳಾದ ಅಜ್ಜಪ್ಪ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಪ್ರಭು ರೋಣದ,  ಶಂಕರಯ್ಯ ಹಿರೇಮಠ, ದಾರೇಶ್ವರ ಹಿರೇಮಠ, ವೀರಯ್ಯ ಹಿರೇಮಠ,  ದಾಕ್ಷಾಯಣಿ ಹಿರೇಮಠ, ಮುಂತಾದವರು ಇದ್ದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರಿಗೆ ಪರಮಪೂಜ್ಯ   ಶಿವಶಾಂತವೀರ ಶರಣರು ಅವರು ಮಾಲಾರೆ​‍್ಣ ಮಾಡಿ ಶುಭಾಶೀರ್ವಾದ ಮಾಡಿದರು.