ಮದುವೆ ಸಮಾರಂಭದಲ್ಲಿ 300- 500 ಜನರು ಪಾಲ್ಗೊಳ್ಳಲು ಅವಕಾಶ ನೀಡಲು ಮನವಿ

ಬೆಂಗಳೂರು, ಜೂ.3,ಮದುವೆಯಂತಹ ಸಮಾರಂಭದಲ್ಲಿ ಕನಿಷ್ಠ300 ರಿಂದ 500 ಅತಿಥಿಗಳಿಗೆ ಬೇರೆ ಬೇರೆ ಸಮಯದಲ್ಲಿ ಭೇಟಿ ನೀಡಲು ಅವಕಾಶ ನೀಡಬೇಕು ಎಂದು ಕರ್ನಾಟಕ ಕೆಟರರ್ಸ್‌ ಒಕ್ಕೂಟ ಒತ್ತಾಯಿಸಿದೆ.ಈ ಬಗ್ಗೆ ಒಕ್ಕೂಟದ ಅಧ್ಯಕ್ಷ ಜಿ.ಕೆ.ಶೆಟ್ಟಿ ಅವರು ಹೇಳಿಕೆ ಬಿಡುಗಡೆ ಮಾಡಿದ್ದು,  ಕೋವಿಡ್‌-19 ಬಿಕ್ಕಟ್ಟಿನಿಂದ ನಮ್ಮ ಆರ್ಥಿಕತೆ ಬುಡಮೇಲಾಗಿದೆ. ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಈಗ ಲಾಕ್‌ಡೌನ್‌ ನಿಧಾನವಾಗಿ ಸಡಿಲಗೊಳಿಸಲಾಗುತ್ತಿದೆ. ವಿವಿಧ ವಲಯಗಳಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸಿರುವುದು ಕೋಟ್ಯಂತರ ಜನರಲ್ಲಿ ಜೀವನೋಪಾಯಕ್ಕೆ ಹೊಸ ಭರವಸೆಗಳನ್ನು ಮೂಡಿಸಿದೆ. ಇನ್ನು ಕೆಲವು ಕ್ಷೇತ್ರಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧ ಸಡಿಲಿಸದೆ ಇರುವುದರಿಂದ ಸಮಸ್ಯೆ ಮುಂದುವರಿದಿದೆ. ಉದಾಹರಣೆಗೆ ಕೆಟರಿಂಗ್ ವಲಯಕ್ಕೆ ಹೇರಲಾದ ಕಠಿಣ ನಿಯಮಗಳ ಮುಂದುವರಿಕೆಯಿಂದಾಗಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ರಾಜ್ಯದಲ್ಲಿ ಕೆಟರಿಂಗ್‌ ಅನ್ನು ಜೀವನೋಪಾಯಕ್ಖಾಗಿ ಅವಲಂಭಿಸಿರುವ ಸುಮಾರು 10 ಲಕ್ಷ ಜನರ ಬದುಕು ಸಂಕಷ್ಟಕ್ಕೀಡಾಗಿದೆ ಎಂದು ತಿಳಿಸಿದ್ದಾರೆ.ಕೋವಿಡ್ ಲಾಕ್‌ಡೌನ್‌ ವೇಳೆಯಲ್ಲಿ ಮದುವೆಯಂತಹ ಸಾಮಾಜಿಕ ಸಮಾರಂಭಗಳಿಗೆ ಸರ್ಕಾರ 50 ಜನರನ್ನು ಮಿತಿಗೊಳಿಸಿದೆ. ಆದರೆ ಇನ್ನೊಂದೆಡೆಯಲ್ಲಿ ಇದೇ ಸರ್ಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸವಾಲಾಗಿದ್ದರೂ ಜೂನ್ 8ರ ಹೊತ್ತಿಗೆ ಗರಿಷ್ಠ ಸಂಖ್ಯೆಯ ಸೇವಾ ವಲಯವನ್ನು ಲಾಕ್‌ ಡೌನ್‌ನಿಂದ ಮುಕ್ತಗೊಳಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಫೆಡರೇಷನ್ ಆಫ್ ಕರ್ನಾಟಕ ಕೆಟರ‍ರ್ಸ್‌ ಸಾಮಾಜಿಕ ಅಂತರವನ್ನು ಕಾದುಕೊಳ್ಳುವನಿಯಮದ ಪಾಲನೆಯನ್ನು ಕಟ್ಟುನಿಟ್ಟಾಗಿ ವಿಧಿಸುವುದರೊಂದಿಗೆ ಮದುವೆಯಂತಹ ಹಾಗೂ ಶುಭ

ಸಮಾರಂಭಗಳಿಗೆ 300 ರಿಂದ 500 ಜನರಿಗೆ ಸೇರಲು ಅವಕಾಶವನ್ನು ನೀಡಬೇಕೆಂದು ಒತ್ತಾಯಿಸುತ್ತದೆ.  ಈ ಬೇಡಿಕೆಯ ಹಿಂದೆ ತಾರ್ಕಿಕ ಮತ್ತು ಆರ್ಥಿಕ ಚಿಂತನೆಗಳೂ ಇವೆ. ಇಲ್ಲವಾದರೆ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗುವ ಭೀತಿ ಎದುರಾಗಿದೆ ಎಂದು ಅವರು ತಿಳಿಸಿದ್ದಾರೆ.ಮದುವೆಯಂತಹ ಸಮಾರಂಭಗಳು ಜರುಗುವಾಗ ಜನರು ಒಮ್ಮೆಗೆ ಬರುವುದಿಲ್ಲ. ಬದಲಿಗೆ ಅತಿಥಿಗಳು ಹಂತ ಹಂತವಾಗಿ ಬರುತ್ತಾರೆ ಮತ್ತು ಎಲ್ಲರು ಒಮ್ಮೆಲೆ ಭೋಜನಶಾಲೆಯತ್ತ ನುಗ್ಗುವುದಿಲ್ಲ. ಮದುವೆಯ ಹಾಲ್‌ನಲ್ಲಿರುವ ಜಾಗವನ್ನು ಬಳಸಿಕೊಂಡು ಅಲ್ಲಿ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.ಕೇವಲ 50 ಜನರನ್ನು ಮಾತ್ರ ಮದುವೆಯಂತಹ ಸಮಾರಂಭಗಳಿಗೆ ಮಿತಿಗೊಳಿಸಿದರೆ ಜನರುಮದುವೆಯಂತಹ ಸಮಾರಂಭಗಳನ್ನು ಮನೆಯಲ್ಲಿಯೇ ಅಥವಾ ಯಾವುದಾದರೂ ಸಣ್ಣದೇವಾಲಯದಲ್ಲಿ ಮುಗಿಸಿ ಬಿಡುತ್ತಾರೆ. ಇದರಿಂದಾಗಿ ಯಾವ ಉದ್ಯೋಗಾವಕಾಶಗಳೂಸೃಷ್ಟಿಯಾಗುವುದಿಲ್ಲ. ಆದ್ದರಿಂದ ದಯವಿಟ್ಟು ಮದುವೆಯಂತಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಕನಿಷ್ಠ300 ರಿಂದ 500 ಅತಿಥಿಗಳಿಗೆ ಬೇರೆ ಬೇರೆ ಸಮಯದಲ್ಲಿ ಭೇಟಿ ನೀಡಲು ಅವಕಾಶ ನೀಡಬೇಕಿದೆ.ಇದು ಕೇವಲ ಕೆಟರಿಂಗ್ ಸೇವಾದಾತರ ಹಿತದೃಷ್ಟಿಯೊಂದಿಗೆ, ಇನ್ನಿತರ ವೃತ್ತಿಯಲ್ಲಿರುವವರಜೀವನೋಪಾಯಕ್ಕೆ ಕೂಡಾ ಆಧಾರವಾಗಬಲ್ಲದು. ಏಕೆಂದರೆ, ಲಕ್ಷಾಂತರ ರೈತರು, ಹೂವಿನಬೆಳೆಗಾರರು ಮತ್ತು ಹಣ್ಣಿನ ಬೆಳೆಗಾರರು, ಪೌಲ್ಟ್ರೀ, ಹಾಲಿನ ಉತ್ಪನ್ನಗಳ ಮಾರಾಟಗಾರರು,ಡೆಕೋರೇರ್ಸ್‌, ಬೇಕರಿಯವರು, ಲೈಟಿಂಗ್, ಸೌಂಡ್ ಸಿಸ್ಟೆಮ್ ಮತ್ತು ಇನ್ನು ಇತರ ವಲಯದವರುಕೂಡ ಮದುವೆಗಳನ್ನು ಆಧರಿಸಿ ಜೀವನ ನಡೆಸುತ್ತಾರೆ. ಈಗ ಇವರೆಲ್ಲರ ಬದುಕು ಕೂಡಾ ಆರ್ಥಿಕಆದಾಯವಿಲ್ಲದೆ ಮೂರಾಬಟ್ಟೆಯಾಗಿದೆ ಎಂದು ಅವರು ತಿಳಿಸಿದ್ದಾರೆ.ಕೆಟರಿಂಗ್ ಉದ್ಯಮದಲ್ಲಿರುವವರ ಪೈಕಿ ಶೇಕಡಾ 60 ರಷ್ಟು ಮಂದಿ ವಲಸೆ ಕಾರ್ಮಿಕರು ಮತ್ತುಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿದ್ದಾರೆ. ಅವರ ಬದುಕು ಈಗ ತೀವ್ರ ಸಂಕಷ್ಟದಲ್ಲಿದೆ.ಕೆಟರಿಂಗ್ ಸರ್ವೀಸ್‌ನಲ್ಲಿರುವ ಸುಮಾರು 10 ಲಕ್ಷದಷ್ಟು ಜನ ಈಗ ನಾನಾ ತೊಂದರೆಗೆಸಿಲುಕಿಕೊಂಡು ಜೀವನೋಪಾಯಕ್ಕೆ ಪರದಾಡುತ್ತಿದ್ದಾರೆ. ಈಗ ನಿಯಮಾವಳಿಗಳನ್ನು ಸಡಿಲಿಸಿ,ಸರ್ಕಾರ ನಂತರದ ದಿನಗಳಲ್ಲಿ ಈ ವಲಯದ ಮೇಲೆ ತೆರಿಗೆಯನ್ನೂ ಹೇರಬಹುದು. ಹೀಗಾಗಿ ಈಗಕೆಟರಿಂಗ್, ಮದುವೆ, ಮತ್ತಿತರ ಸಮಾರಂಭಗಳ ಆಯೋಜನೆ ಮೇಲೆ ವಿಧಿಸಲಾಗಿರುವ,ನಿಯಮಾವಳಿಗಳನ್ನು ಸಡಿಲಿಸಿ, ಲಕ್ಷಾಂತರ ಕುಟುಂಬಗಳ ಮೇಲೆ ಸರಕಾರ ಕರುಣೆ ತೋರಿಸಬೇಕಿದೆ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.