ಮುಖ್ಯಮಂತ್ರಿ ವಿಶೇಷ ನಿಧಿಯಾಗಿ 30 ಕೋಟಿ ಅನುದಾನ

ಲೋಕದರ್ಶನ ವರದಿ

ಕಾಗವಾಡ: ಕಾಗವಾಡ ವಿಧಾನಸಭಾ ಮತಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪಾ ಮುಖ್ಯಮಂತ್ರಿ ವಿಶೇಷ ನಿಧಿಯಾಗಿ 30 ಕೋಟಿ ರೂ. ಅನುದಾನ ಮಂಜೂರುಗೊಳಿಸಿದ್ದು, ಇದರ ಕಾಮಗಾರಿಗಳಿಗೆ ಚಾಲನೆ ನೀಡಿ, ಅಭಿವೃದ್ಧಿ ಕೈಗೊಳ್ಳುತ್ತಿದ್ದೇನೆ ಎಂದು ಕಾಗವಾಡದ ಅನರ್ಹ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

ಶನಿವಾರ ರಂದು ನಿಪ್ಪಾಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿ ಯೋಜನೆಯಡಿಯಲ್ಲಿ ಐನಾಪೂರ-ಅಥಣಿ ಮಾರ್ಗದ ಅಭಿವೃದ್ಧಿಗಾಗಿ 3.10 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಿ, ಚಾಲನೆ ನೀಡಿದ ಬಳಿಕ ಮಾತನಾಡಿದರು. ಕಳೇದ ಅನೇಕ ವರ್ಷಗಳಿಂದ ಈ ಮಾರ್ಗದ ರಸ್ತೆ ಅಭಿವೃದ್ಧಿಗಾಗಿ ಪ್ರಯಾಣಿಕರ ಬೇಡಿಕೆಯಾಗಿತ್ತು. ಇದನ್ನು ಗಮನದಲ್ಲಿ ತೆಗೆದುಕೊಂಡು ಮುಖ್ಯಮಂತ್ರಿಗಳಿಗೆ ಅಹ್ವಾಲ ಸಲ್ಲಿಸಿದ ನಂತರ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿಯಲ್ಲಿ 3.10 ಕೋಟಿ ರೂ. ಅನುದಾನ ಮಂಜೂರುಗೊಂಡಿದೆಯೆಂದು ಶ್ರೀಮಂತ ಪಾಟೀಲ ಹೇಳಿದರು.

ಐನಾಪೂರ ಪಟ್ಟಣಕ್ಕೆ 11 ಕೋಟಿ ಮಂಜೂರು:

ಐನಾಪೂರ ಪಟ್ಟಣದಲ್ಲಿಯ ಬೇರೆ ಬೇರೆ ಅಭಿವೃದ್ಧಿ ಕಾಮಗಾರಿಗಳಿಗಾಗಿ 11.10 ಕೋಟಿ ರೂ. ಅನುದಾನ ಮಂಜೂರುಗೊಳಿಸಲಾಗಿದೆ. ಇದೇ ರೀತಿ ಕೃಷ್ಣಾ-ಕಿತ್ತೂರ ಗ್ರಾಮದ ಅಭಿವೃದ್ಧಿಗಾಗಿ 4.37 ಕೋಟಿ, ಕಾತ್ರಾಳ ಗ್ರಾಮದಲ್ಲಿಯ ರಸ್ತೆ, ಭವನ ಅಭಿವೃದ್ಧಿಗಾಗಿ 4 ಕೋಟಿ ಅನುದಾನ ಮಂಜೂರುಗೊಳಿಸಿದ್ದು. 

ಶನಿವಾರ ರಂದು ಈ ಕಾಮಗಾರಿಗಳಿಗೆ ಶ್ರೀಮಂತ ಪಾಟೀಲರು ಪೂಜೆ ಸಲ್ಲಿಸಿ, ಚಾಲನೆ ನೀಡಿದರು. ಲೋಕೋಪಯೋಗಿ ಇಲಾಖೆಯ ಅಧಿಕಾರಿ ಎಂ.ಎಸ್. ವಡೆಯರ, ಜಿಪಂ ಸದಸ್ಯ ಆರ್.ಎಂ.ಪಾಟೀಲ, ರಾಜೇಂದ್ರ ಪೋತದಾರ, ದಾದಾ ಪಾಟೀಲ, ಉದಯ ಮಾನೆ, ನಾನಾಸಾಹೇಬ ಅವತಾಡೆ, ಪ್ರಶಾಂತ ಅಪರಾಜ, ಸುರೇಶ ಗಾಣಿಗೇರ, ಪ್ರದೀಪ ಲಿಂಬಿಕಾಯಿ, ದಶ್ರತ ತೇರದಾಳೆ, ರತನ ಪಾಟೀಲ, ಸುಶಾಂತ ಕುಚನೂರೆ, ಸೇರಿದಂತೆ ಅನೇಕರು ಇದ್ದರು.