ಬಿಲ್ಗ್ರೇಡ್, ಏ 5,ಕೋವಿಡ್ -19 ಹರಡುವುದನ್ನು ತಡೆಗಟ್ಟಲು ವಿಧಿಸಲಾಗಿದ್ದ ಕರ್ಫ್ಯೂ ಉಲ್ಲಂಘಿಸಿದ ಆರೋಪದ ಮೇಲೆ ಸರ್ಬಿಯಾದ ಫುಟ್ಬಾಲ್ ಆಟಗಾರ ಅಲೆಕ್ಸಾಂಡರ್ ಪ್ರಿಜೋವಿಕ್‌ಗೆ ಮೂರು ತಿಂಗಳ ಗೃಹಬಂಧನ ವಿಧಿಸಲಾಗಿದೆ.ಸೌದಿ ಅರೇಬಿಯಾದ ಕ್ಲಬ್ ಅಲ್-ಇಟ್ಟಿಹಾಡ್ ಪರ ಆಡುವ 29 ವರ್ಷದ ಸ್ಟ್ರೈಕರ್, ಶನಿವಾರ ಬೆಲ್ಗ್ರೇಡ್‌ನಲ್ಲಿ ನಡೆದ ವಿಡಿಯೋ ಲಿಂಕ್ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಲಾಕ್ ಡೌನ್ ಸಂಬಂಧ ಸಂಜೆ 5ರಿಂದ ಬೆಳಗ್ಗೆ 5ರವರೆಗೆ ವಿಧಿಸಲಾಗಿದ್ದ ಕರ್ಫ್ಯೂವನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಿಜೋವಿಕ್ ಅವರನ್ನು ಬಂಧಿಸಲಾಗಿದೆ. ಜತೆಗೆ ಹೋಟೆಲ್ ಆವರಣದಲ್ಲಿ ಗುಂಪುಗೂಡಿದ್ದ ಇತರ 19 ಮಂದಿಯನ್ನು ಇದೇ ಆರೋಪ ಮೇರೆಗೆ ಬಂಧಿಸಲಾಗಿದೆ.