ಸರಕಾರಿ ಶಾಲಾ ಕಟ್ಟಡ ನಿರ್ಮಿಸಲು 3 ಎಕರೆ: ಎಂ.ಎಸ್.ಪಿ.ಎಲ್ ಲಿಮಿಟೆಡ್ನ್ ದಾನ

ಸಂಡೂರು 09:  ದಿನಾಂಕ:- 5/09/2019 ರಂದು ಎಂ ಎಸ್ ಪಿ ಎಲ್ ಲಿಮಿಟೆಡ್ ಹೊಸಪೇಟೆ, ಈ ಸಂಸ್ಥೆಯಿಂದ ಸಂಡೂರು ತಾಲೂಕಿನ ಜೈಸಿಂಗ್ಪುರ ಗ್ರಾಮದಲ್ಲಿ ಸರಕಾರಿ ಶಾಲಾ ಕಟ್ಟಡ ನಿರ್ಮಿಸಲು 3 ಎಕರೆ 53 ಸೆಂಟ್ಸ್ (3.53 ಸೆಂಟ್ಸ್) ಜಮೀನನ್ನು ಗ್ರಾಮಸ್ಥರ ಕೋರಿಕೆಯ ಮೇರೆಗೆ ದಾನವಾಗಿ ನೀಡಲಾಯಿತು,  ಜೈಸಿಂಗ್ಪುರ ಗ್ರಾಮವು ಸಂಡೂರು ಮತ್ತು ಹೊಸಪೇಟೆ ತಾಲೂಕಿನ ಮಧ್ಯ  ಭಾಗದಲ್ಲಿದ್ದು, ಪ್ರೌಢ ಶಿಕ್ಷಣವನ್ನೊಳಗೊಂಡಂತೆ ಹೆಚ್ಚಿನ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ತಾಲೂಕು ಕೇಂದ್ರಗಳಿಗೆ ಹೋಗುವುದು ಕಷ್ಟ ಸಾದ್ಯವಾಗಿದ್ದು , ಶಿಕ್ಷಣದಿಂದ ವಂಚಿತರಾಗುತ್ತಿದ್ದರು. 

ಇದನ್ನು ಮನಗಂಡು ಗ್ರಾಮದ ಮುಖಂಡರುಗಳು ಹಾಗೂ  ಗ್ರಾಮ ಪಂಚಾಯತಿ ಸದಸ್ಯರುಗಳು ಸಂಸ್ಥೆಗೆ ಮನವಿ ಸಲ್ಲಿಸಿದ್ದರಿಂದ, ಈಗಾಗಲೇ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿರುವ ಎಂ ಎಸ್ ಪಿ ಎಲ್ ಸಂಸ್ಥೆಯು ಗ್ರಾಮೀಣ ಮಕ್ಕಳ ಶಿಕ್ಷಣ ಪ್ರೋತ್ಸಾಯಿಸುವ ಉದ್ದೇಶದಿಂದ ಸಂಡೂರಿನಲ್ಲಿರುವ ಸಬ್ರಿಜಿಸ್ಟಾರ್ ಕಚೇರಿಯಲ್ಲಿ 3.53 ಸೆಂಟ್ಸ್ ಜಮೀನನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹೆಸರಿನಲ್ಲಿ ನೋಂದಾಯಿಸಿ, ಎಂ ಎಸ್ ಪಿ ಎಲ್ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶ್ರೇಣಿಕ್ ಬಲ್ಡೋಟ ರವರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಐ.ಆರ್.ಅಕ್ಕಿರವರಿಗೆ ನೋಂದಾವಣಿ ಪತ್ರವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಹಸ್ತಾಂತರಿಸಿದರು ಎಂದು ಗ್ರಾಮದ ಮುಖಂಡರಾದ ಶ್ರೀಧರ್ ರವರು ತಿಳಿಸಿದರು. 

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಬಸವರಾಜಪ್ಪ , ಗ್ರಾಮ ಪಂಚಾಯತಿ ಸದಸ್ಯರುಗಳಾದ ಪರಶುರಾಮಪ್ಪ, ರಾಜಾನಾಯ್ಕ್, ಮುಖಂಡರಾದ ಹನುಮಂತರಾವ್ , ಹಾಗೂ ಎಂ ಎಸ್ ಪಿ ಎಲ್ ಸಂಸ್ಥೆಯ ಮೈನ್ಸ್ ವಿಭಾಗದ ಉಪಾದ್ಯಕ್ಷರಾದ ಕೆ ಮಧುಸುದನ್ , ಸಮಾಜ ಸೇವಾ ವಿಭಾಗದ ಮುಖ್ಯಸ್ಥರಾದ ಎಚ್ ಕೆ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.