ಪಾಕ್ ಐಎಸ್‌ಐ-ಸಂಬಂಧಿತ ವಿಶಾಖಪಟ್ಟಣಂ ಬೇಹುಗಾರಿಕೆ ಪ್ರಕರಣದಲ್ಲಿ 3 ಆರೋಪಿಗಳ ಬಂಧನ
ಕಾರವಾರ 19: ಸ್ಥಳೀಯ ಪೊಲೀಸರ ನೆರವಿನೊಂದಿಗೆ ಪಾಕಿಸ್ತಾನಿ ಐಎಸ್‌ಐ-ಸಂಬಂಧಿತ ವಿಶಾಖಪಟ್ಟಣಂ ಬೇಹುಗಾರಿಕೆ ಪ್ರಕರಣದಲ್ಲಿ ಸೂಕ್ಷ್ಮ ಮತ್ತು ರಹಸ್ಯವಾದ ನೌಕಾ ರಕ್ಷಣಾ ಮಾಹಿತಿಯನ್ನು ಇಟ್ಟು ಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಾಧ್ಯಮ ಹೇಳಿಕೆಯನ್ನು ಬುಧುವಾರ ಬಿಡುಗಡೆ ಮಾಡಿದೆ.ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಿಂದ ವೇತನ್ ಲಕ್ಷ್ಮಣ್ ತಾಂಡೇಲ್ ಮತ್ತು ಅಕ್ಷಯ್ ರವಿ ನಾಯ್ಕ್ ಎಂಬ ಯುವಕರನ್ನು ಬಂಧಿಸಲಾಗಿದೆ.
ಕೇರಳದ ಕೊಚ್ಚಿಯಿಂದ ಅಭಿಲಾಷ್ ಪಿ.ಎ. ಎಂಬ ಯುವಕನನ್ನುಬಂಧಿಸಲಾಗಿದೆ . ಇದರೊಂದಿಗೆ ಪ್ರಕರಣದ ಒಟ್ಟು ಬಂಧಿತರ ಸಂಖ್ಯೆ ಎಂಟಕ್ಕೆ ಏರಿದೆ ಎಂದು ಎನ್ ಐ ಎ ಹೇಳಿದೆ.ಮಂಗಳವಾರ ಬಂಧಿತರಾಗಿರುವ ಎಲ್ಲಾ ಮೂವರು ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನದ ಗುಪ್ತಚರ ಆಪರೇಟಿವ್‌ಗಳೊಂದಿಗೆ (ಪಿಐಒ) ಸಂಪರ್ಕದಲ್ಲಿರುವುದು ಕಂಡುಬಂದಿದೆ.
ಅವರು ಕಾರವಾರ ನೌಕಾನೆಲೆ ಮತ್ತು ಕೊಚ್ಚಿ ನೌಕಾನೆಲೆಯಲ್ಲಿ ಭಾರತೀಯ ರಕ್ಷಣಾ ಸಂಸ್ಥೆಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು. ಮತ್ತು ಎನ್‌ಐಎ ತನಿಖೆಯ ಪ್ರಕಾರ, ಮಾಹಿತಿಯ ವಿನಿಮಯವಾಗಿ ಪಿಐಒಗಳಿಂದ ಹಣವನ್ನು ಪಡೆಯುತ್ತಿದ್ದರು ಎನ್ ಐಎ ಹೇಳಿದೆ.ಬಂಧಿತ ಯುವಕರ ಮೇಲೆಐಪಿಸಿಯ ಸೆಕ್ಷನ್ 120 ಬಿ ಮತ್ತು 121 ಎ, ಯುಎ (ಪಿ) ಕಾಯಿದೆಯ ಸೆಕ್ಷನ್ 17 ಮತ್ತು 18 ಮತ್ತು ಸೆಕ್ಷನ್ 3 ರ ಅಡಿಯಲ್ಲಿ ಆಂಧ್ರ್ರದೇಶದ ಕೌಂಟರ್ ಇಂಟೆಲಿಜೆನ್ಸ್ ಸೆಲ್ ಮೂಲತಃ ದಾಖಲಿಸಿದ ಪ್ರಕರಣದಲ್ಲಿ ಎನ್‌ಐಎ ಇದುವರೆಗೆ , ಇಬ್ಬರು ಪಾಕಿಸ್ತಾನಿ ಆಪರೇಟಿವ್‌ಗಳು ಸೇರಿದಂತೆ ಐವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.
ಭಾರತ ವಿರೋಧಿ ಪಿತೂರಿಯ ಭಾಗವಾಗಿ ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಸೂಕ್ಷ್ಮ ಪ್ರಮುಖ ಮಾಹಿತಿ ಸೋರಿಕೆಗೆ ಸಂಬಂಧಿಸಿದ ಬೇಹುಗಾರಿಕೆ ದಂಧೆಯಲ್ಲಿ ಬಂಧಿತ ಆರೋಪಿ ಆಕಾಶ್ ಸೋಲಂಕಿ ಜೊತೆಗೆ ಪಾಕಿಸ್ತಾನಿ ಪ್ರಜೆ ಮೀರ್ ಬಾಲಾಜ್ ಖಾನ್ ಭಾಗಿಯಾಗಿದ್ದರು ಎಂದು ಎನ್‌ಐಎ ತನಿಖೆಗಳು ಬಹಿರಂಗಪಡಿಸಿವೆ. ಮೀರ್ ಬಾಲಾಜ್ ಮತ್ತು ಸೋಲಂಕಿ ಅವರಲ್ಲದೆ, ಎನ್‌ಐಎ ಜೂನ್ 2023 ರಲ್ಲಿ ಅಧಿಕಾರ ವಹಿಸಿಕೊಂಡ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಪಿಐಒ ಅಲ್ವೆನ್, ಮನಮೋಹನ್ ಸುರೇಂದ್ರ ಪಾಂಡ ಮತ್ತು ಅಮಾನ್ ಸಲೀಂ ಶೇಖ್ ಎಂದು ಗುರುತಿಸಲಾಗಿದೆ.ಪಾಕ್ ಮೂಲದ ಮತ್ತು ಇತರ ದೇಶವಿರೋಧಿ ಅಂಶಗಳ ಸಂಪೂರ್ಣ ಬೇಹುಗಾರಿಕೆ ಪಿತೂರಿಯನ್ನು ಬಯಲಿಗೆಳೆಯಲು ಭಯೋತ್ಪಾದನಾ ನಿಗ್ರಹ ಸಂಸ್ಥೆ ಪ್ರಕರಣದ ತನಿಖೆಯನ್ನು ಮುಂದುವರೆಸಿದೆ.