2ನೇ ದಿನದ ತೋಟಗಾರಿಕೆ ಮೇಳ ಽ ಫಲಶ್ರೇಷ್ಠ ರೈತರಿಗೆ ಸನ್ಮಾನ

2nd day horticulture fair honors the best farmers


2ನೇ ದಿನದ ತೋಟಗಾರಿಕೆ ಮೇಳ ಽ ಫಲಶ್ರೇಷ್ಠ ರೈತರಿಗೆ ಸನ್ಮಾನ 


ಬಾಗಲಕೋಟೆ 22: ರೈತರಿಗೆ ಅನೇಕ ರೀತಿಯ ಹೊಸ ಹೊಸ ಅವಿಷ್ಕಾರಗಳ ಬಗ್ಗೆ ಕಲ್ಪನೆ ಕೊಟ್ಟು ಇಳುವರಿ ಹೆಚ್ಚಿನ ಪ್ರಮಾಣ ಪಡೆದು ಆರ್ಥಿಕವಾಗಿ ಬಲಿಷ್ಟವಾಗುವಂತೆ ಮಾಡುವ ಕೆಲಸ ತೋಟಗಾರಿಕೆ ವಿಶ್ವವಿದ್ಯಾಲಯ ಮಾಡಬೇಕೆಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಗಡೆ ಹೇಳಿದರು. 

ತೋವಿವಿಯ ಉದ್ಯಾನಗಿರಿಯಲ್ಲಿ ಹಮ್ಮಿಕೊಂಡ ತೋಟಗಾರಿಕೆ ಮೇಳದ ಎರಡನೇ ದಿನದ ಕಾರ್ಯಕ್ರಮದಲ್ಲಿ 8 ಜಿಲ್ಲೆಯ ಫಲಶ್ರೇಷ್ಠ ರೈತರನ್ನು ಸನ್ಮಾನಿಸಿ ಮಾತನಾಡಿದ ಅವರು ವಿಜ್ಞಾನಿಗಳು ಅವಿಷ್ಕಾರ ಮಾಡಿ ಹೊರತಂದ ಅನೇಕ ವಿಧದ ತಳಿಗಳು, ಅವಿಷ್ಕಾರಗಳನ್ನು ನೋಡಿ ತಿಳಿದುಕೊಂಡು ಅವುಗಳ ಕಲ್ಪನೆ ಮೂಡಿದಾಗ ಮಾತ್ರ ತೋಟಗಾರಿಕೆ ಮೇಳ ಏರಿ​‍್ಡಸಿದ್ದಕ್ಕೆ ಸಾರ್ಥಕ ಪಡೆದುಕೊಳ್ಳುತ್ತದೆ. ಇದರಿಂದ ರೈತನ ಸಮಗ್ರ ಬೇಸಾಯ ಪದ್ದತಿಯಿಂದ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. 

ಕೀಟಗಳನ್ನು ನಾಶ ಮಾಡಲು ಕೀಟನಾಶಕ ಓಷಧಿಗಳ ಸಿಂಪರಣೆ ಮಾಡುತ್ತೇವೆ. ಆದರೆ ಎಲ್ಲ ಕೀಟಗಳು ಬೆಳೆಗಳನ್ನು ನಾಶ ಮಾಡುವದಿಲ್ಲ. 100ಕ್ಕೆ 99 ರಷ್ಟು ಕೀಟಗಳು ರೈತ ಮಿತ್ರವಾಗಿರುತ್ತವೆ. ಪ್ರತಿಶತ ಒಂದು ರಷ್ಟು ಕೀಟಗಳು ಮಾತ್ರ ಬೆಳೆಗಳನ್ನು ನಾಶ ಮಾಡುತ್ತವೆ. ರೈತ ಏನೇಲ್ಲ ಸಾಧಿಸಬಹುದು ಎಂಬುದರ ವಿಶ್ವಾಸ ಮೂಡಿಸುವ ಕಾರ್ಯ ತೋಟಗಾರಿಕೆ ವಿಶ್ವವಿದ್ಯಾಲಯ ಮಾಡುತ್ತಿದೆ. ತೋಟಗಾರಿಕೆ ವಿಶ್ವವಿದ್ಯಾಲಯ ಇನ್ನು ಹೆಚ್ಚಿನ ಸಂಶೋಧನೆ ನಡೆಸಲಿ ಕೇಂದ್ರ ಸರಕಾರದಿಂದ ಏನೇನು ಬೇಕು ಅವುಗಳನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. 

ವಿಧಾನ ಪರಿಷತ್ ಶಾಸಕ ಪಿ.ಎಚ್‌.ಪೂಜಾರ ಮಾತನಾಡಿ ಬಯಲು ಸೀಮೆ ಎನಿಸಿರುವ ಬಾಗಲಕೋಟೆ ಜಿಲ್ಲೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ತೋಟಗಾರಿಕೆ ವಿಶ್ವವಿದ್ಯಾಲಯ ಈ ಭಾಗದ ಹೆಮ್ಮೆಯ ಕೊಡುಗೆಯಾಗಿದ್ದು, ಕೃಷಿಪ್ರಧಾನವಾಗಿರುವ ಬಾಗಲಕೋಟೆ ಹಾಗೂ ಉತ್ತರ ಕನ್ನಡ ಭಾಗದ ಅನೇಕ ಜಿಲ್ಲೆಗಳಲ್ಲಿ ಇನ್ನು ಮುಂದೆ ವಿಫುಲವಾಗಿ ತೋಟಗಾರಿಕೆ ಬೆಳೆ ಬೆಳೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು. 

ಬಾಗಲಕೋಟೆ-ವಿಜಯಪುರ ಜಿಲ್ಲೆಗಳ ನೆಲದಲ್ಲಿ ಅಧಿಕ ಪ್ರಮಾಣದ ದಾಳಿಂಬೆ, ಮಾವು, ದ್ರಾಕ್ಷಿ, ಚಿಕ್ಕು ಹಣ್ಣುಗಳ ಬೆಳೆಗಳಿಗೆ ಹೇಳಿ ಮಾಡಿಸಿದ ನೆಲ ಇಲ್ಲಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯ ಹಿನ್ನೀರು ರೈತರಿಗೆ ವರದಾನವಾಗಿದೆ. ಈ ಭಾಗದಲ್ಲಿ ದಾಳಿಂಬೆ ಬೆಳೆಗೆ ವಿಫುಲ ಅವಕಾಶ ದೊರಕಿಸಿಕೊಡಬೇಕಾಗಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ತೋವಿವಿಯಲ್ಲಿ ಜಗತ್ತಿನಲ್ಲಿ ಬೆಳೆಯಬಹುದಾದ ಎಲ್ಲ ತರಹದ ಹೂ, ಹಣ್ಣುಗಳನ್ನು ಬೆಳೆಯುವಂತಾಗಿ ಈ ಭಾಗದ ರೈತ ಆರ್ಥಿಕವಾಗಿ ಪ್ರಭಲವಾಗಿ ಬೆಳೆಯವಂತಾಗಬೇಕು ಎಂದರು. 

ಈ ಸಂದರ್ಬಧಲ್ಲಿ ತೋಟಗಾರಿಕೆ ಮೇಳದ ಮಾಹಿತಿಯನ್ನು ತ್ವರಿತವಾಗಿ ಪ್ರಕ್ರಿಯೆ ನೀಡುವ ಜಾಲತಾಣಗಳ ಕ್ಯೂಆರ್ ಕೋಡಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ, ವಿಸ್ತರಣಾ ನಿರ್ದೇಶಕ ಡಾ.ಟಿ.ಬಿ.ಅಳ್ಳೊಳ್ಳಿ, ಡೀನ್ ಸ್ನಾತಕೋತ್ತರ ಡಾ.ಲಕ್ಷ್ಮೀನಾರಾಯಣ ಹೆಗಡೆ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಯ ಕುಲಪತಿ ಡಾ.ಆರ್‌.ಸಿ.ಜಗದೀಶ, ಬೆಂಗಳೂರಿನ ಕೃವಿವಿಯ ಸಂಶೋಧನಾ ನಿರ್ದೇಶಕ ಡಾ.ಎಚ್‌.ಎಸ್‌.ಶಿವರಾಮು, ಧಾರವಾಡ ಕೃವಿವಿಯ ವಿಸ್ತರಣಾ ನಿರ್ದೇಶಕ ಡಾ.ಬಸವರಾಜಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.