ಲಿನ್ಕಾಯಿನ್, ಫೆ 8, ಇಲ್ಲಿ ನಡೆಯುತ್ತಿರುವ ಭಾರತ ಎ ಮತ್ತು ನ್ಯೂಜಿಲೆಂಡ್ ಎ ನಡುವಿನ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದ ಎರಡನೇ ದಿನ ಸಂಪೂರ್ಣವಾಗಿ ಮಳೆಗೆ ಆಹುತಿಯಾಯಿತು.ಶುಕ್ರವಾರ ಆರಂಭವಾಗಿದ್ದ ಎರಡನೇ ಹಣಾಹಣಿಯ ಮೊದಲನೇ ದಿನ ನ್ಯೂಜಿಲೆಂಡ್ ಎ ಅತ್ಯುತ್ತಮ ಬ್ಯಾಟಿಂಗ್ ಮಾಡಿತ್ತು. ಮಧ್ಯಮ ಕ್ರಮಾಂಕದ ಗ್ಲೆನ್ ಫಿಲಿಪ್ಸ್ (65 ರನ್) ಹಾಗೂ ಡೇನ್ ಕ್ಲೆವರ್(ಔಟಾಗದೆ 46 ರನ್) ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ಎ ಮೊದಲನೇ ದಿನ ಅಂತ್ಯಕ್ಕೆ 90 ಓವರ್ಗಳಿಗೆ ಐದು ವಿಕೆಟ್ ನಷ್ಟಕ್ಕೆ 276 ರನ್ ಗೌರವ ಮೊತ್ತ ದಾಖಲಿಸಿತ್ತು. ಇಂದು ಆರಂಭವಾಗಬೇಕಿದ್ದ ಎರಡನೇ ದಿನಕ್ಕೆ ಬೆಳಗ್ಗೆಯಿಂದಲೇ ಮಳೆ ಕಾಟ ನೀಡಿತು. ಇದರ ಫಲವಾಗಿ ಎರಡನೇ ದಿನ ಒಂದೂ ಎಸೆತ ಕಾಣದೆ ಮುಕ್ತಾಯವಾಯಿತು.