2ನೇ ಚುಟುಕು ಸಾಹಿತ್ಯಸಮ್ಮೇಳನ ನಿಯೋಜಿತ ಸವಾ9ಧ್ಯಕ್ಷ ,ಕವಿ ಶ್ರೀನಿವಾಸ್ ಚಿತ್ರಗಾರರಿಗೆ ಸತ್ಕಾರ

2ನೇ ಚುಟುಕು ಸಾಹಿತ್ಯಸಮ್ಮೇಳನ ನಿಯೋಜಿತ ಸವಾ9ಧ್ಯಕ್ಷ ,ಕವಿ ಶ್ರೀನಿವಾಸ್ ಚಿತ್ರಗಾರರಿಗೆ ಸತ್ಕಾರ 2nd Chutuku Sahitya Sammelana's designated chairperson, poet Srinivas, entertains painters

ಕೊಪ್ಪಳ  18: ತಾಲ್ಲೂಕಿನ  ಕಿನ್ನಾಳ ಗ್ರಾಮದಲ್ಲಿ ಜೂನ್ ತಿಂಗಳ ಕೊನೆ ವಾರದಲ್ಲಿ ಉದ್ದೇಶಿರುವ  ಕೊಪ್ಪಳ ತಾಲೂಕು ಎರಡನೇ ಚುಟುಕು ಸಾಹಿತ್ಯ ಸಮ್ಮೇಳನದ ನಿಯೋಜಿತ  ಸವಾ9ಧ್ಯಕ್ಷರಾದ ಕವಿ , ಶಿಕ್ಷಕರಾದ ಶ್ರೀನಿವಾಸ ಚಿತ್ರಗಾರ ಅವರಿಗೆ ಸೋಮವಾರ ತಾಲುಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ  ಕಿನ್ನಾಳ ಗ್ರಾಮದ ಅವರ ’ಹಸನ್ಮುಖಿ ’ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಪರಿಷತ್ ಜಿಲ್ಲಾಧ್ಯಕ್ಷ ರುದ್ರ​‍್ಪ ಆರ್ ಭಂಡಾರಿ ಅವರು ಮಾತನಾಡಿ, ಕೊಪ್ಪಳ ತಾಲೂಕು ಚುಟುಕು  ಸಾಹಿತ್ಯ ಪರಿಷತ್ ಸಮ್ಮೇಳನವನ್ನು  ಜೂನ್ ಕೊನೆ ವಾರದಲ್ಲಿ ಕರಕುಶಲಗಳ ತವರೂರಾದ ಕಿನ್ನಾಳ ಗ್ರಾಮದಲ್ಲಿ ನಡೆಸಬೇಕೆಂಬ ಬಯಕೆ ಪರಿಷತ್ ಗೆ  ಇದ್ದು, ಜಾಗತಿಕ ಮಟ್ಟದಲ್ಲಿ ಕರಕುಶಲಗಳಿಂದ ಪ್ರಸಿದ್ಧಿ ಪಡೆದ  ಕಿನ್ನಾಳ ಗ್ರಾಮವಾಗಿದ್ದು, ಈ ಊರಿನಲ್ಲಿ ಹುಟ್ಟಿ ಬೆಳೆದ  ಶ್ರೀನಿವಾಸ್ ಅವರು ಸುಮಾರು 25 ಸಾಹಿತ್ಯ ಕೃತಿಗಳನ್ನು ರಚಿಸಿದ್ದು ಕನ್ನಡ ಸಾಹಿತ್ಯ ಹಾಗೂ ಮಕ್ಕಳ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.

ಈ ಕಾರಣದಿಂದ ಗ್ರಾಮೀಣ ಭಾಗಗಳಲ್ಲಿ ಸಾಹಿತ್ಯದ ಕಂಪು ಮೂಡಿಸುವುದು, ವಿವಿಧ ವಿಷಯ ಕುರಿತು ಗೋಷ್ಠಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ,ಸ್ಥಳೀಯ ಸಮಸ್ಯೆಗಳ ಕುರಿತು ಹಕ್ಕೊತ್ತಾಯ ಮಂಡನೆ ಉದ್ದೇಶವಿದೆ, ಸ್ಥಳೀಯರು ಚುಟುಕು ಸಾಹಿತ್ಯ ಸಮ್ಮೇಳನವನ್ನು ಹಬ್ಬದ ಸಂಭ್ರಮದಂತೆ ಆಚರಿಸೋಣ ಎಂದು ಮನವಿ ಮಾಡಿದರು. ಅತಿಥಿಯಾಗಿದ್ದ  ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ , ಸಾಹಿತಿಜಿ. ಎಸ್‌. ಗೋನಾಳ ಅವರು ಮಾತನಾಡಿ, ಕಲೆ,ಸಾಹಿತ್ಯ ಮತ್ತು ಸಹಕಾರಿ ಕ್ಷೇತ್ರದಲ್ಲಿ ಅತ್ಯುತ್ತಮ ಸ್ಥಾನ ಪಡೆದ ಕಿನ್ನಾಳ ಗ್ರಾಮದಲ್ಲಿ ಸಮ್ಮೇಳನ ವನ್ನೂ ವಿಜೃಂಬಣೆಯಿಂದ ಯಶಸ್ಸಿಗೆ ಕಿನ್ನಾಳ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮುಖಂಡರ, ಯುವಜನರ ಸಹಯೋಗದಲ್ಲಿ ಸಭೆ ನಡೆಸಿ ದಿನಾಂಕ ನಿಗದಿ ಹಾಗೂ ಸಮ್ಮೇಳನ ಯಶಸ್ವಿಗೆ ವಿವಿಧ ಸಮಿತಿ ಮೂಲಕ ಜವಾಬ್ದಾರಿ ಹಂಚಿಕೊಳ್ಳುವುದಾಗಿ ತಿಳಿಸಿದರು. ಸನ್ಮಾನ ಸ್ವೀಕರಿಸಿದ ಶ್ರೀನಿವಾಸ ಚಿತ್ರಗಾರ ಆವರು ಸವಾ9ಧ್ಯಕ್ಷ  ಹುದ್ದೆಗೆ ಜವಾಬ್ದಾರಿ ನೀಡಿದ ಸಂಘಟಕರಿಗೆ ಕರ್ತೃಘ್ನತೆ ಸಲ್ಲಿಸಿದರು,