ಪ್ಯಾರಿಸ್, ಜೂನ್ 14, ಫ್ರಾನ್ಸ್ ನಲ್ಲಿ ಹೊಸದಾಗಿ ಕರೋನ ಸೋಂಕಿನಿಂದ 24 ಸಾವು ವರದಿಯಾಗಿದ್ದು, ಪರಿಣಾಮ ದೇಶದಲ್ಲಿ ಈವರೆಗೆ ಮೃತರ ಸಂಖ್ಯೆ 29,398 ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ಹೊಸ ಅಂಕಿ ಅಂಶಗಳು ತಿಳಿಸಿವೆ.ಶನಿವಾರದಂದು 526 ಹೊಸ ಸೋಂಕು ಪ್ರಕರಣಗಳು ಕಂಡುಬಂದಿದ್ದು, ಶುಕ್ರವಾರದ 726 ರಿಂದ 156,813 ಕ್ಕೆ ತಲುಪಿದೆ.ಈ ನಡುವೆ ಸೋಂಕಿನಿಂದ 10,909 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಫ್ರಾನ್ಸ್ ತನ್ನ ಯುರೋಪಿಯನ್ ಆಂತರಿಕ ಗಡಿಗಳಲ್ಲಿನ ಎಲ್ಲಾ ಸಂಚಾರ ನಿರ್ಬಂಧಗಳನ್ನು ನಾಳೆಯಿಂದ ತೆಗೆದುಹಾಕಲಿದೆ ಎಂದು ವಿದೇಶಾಂಗ ಸಚಿವ ಜೀನ್-ಯ್ವೆಸ್ ಲೆ ಡ್ರಿಯಾನ್ ಮತ್ತು ಆಂತರಿಕ ಸಚಿವ ಕ್ರಿಸ್ಟೋಫೆ ಕ್ಯಾಸ್ಟನರ್ ಹೇಳಿದ್ದಾರೆ .ಸ್ಪೇನ್ ಮತ್ತು ಬ್ರಿಟನ್‌ನಿಂದ ಆಗಮಿಸುವ ಪ್ರಯಾಣಿಕರು ಫ್ರಾನ್ಸ್‌ಗೆ ಆಗಮಿಸಿದರೆ ಗ 14 ದಿನಗಳ ಕ್ವಾರಂಟೈನ್ ಒಳಪಡಬೇಕಿದೆ.