ಬೆಂಗಳೂರು, ಆ 17 ರಾಜ್ಯದ ಹಲವೆಡೆ ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗಾಗಿ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ತಿಳಿಸಿದ್ದಾರೆ
2018-19ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡ ಹಾಗೂ ಕೊಂಕಣಿ ಕಲಾವಿದರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು
ನೆರ ಪೀಡಿತ ಜನರಿಗಾಗಿ ವಾಣಿಜ್ಯ ಮಂಡಳಿ ಸ್ಪದಿಸುತ್ತದೆ ಕೊಚ್ಚಿ ಹೋಗಿರುವ ಬದುಕು ಕಟ್ಟಿಕೊಳ್ಳಲು ಅಳಿಲು ಸೇವೆ ಸಲ್ಲಿಸುತ್ತದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರುಗಳಾದ ಸಾರಾ.ಗೋವಿಂದು, ಎಸ್.ಎ.ಚಿನ್ನೆಗೌಡ, ಪದಾದಿಕಾರಿಗಳು ಉಪಸ್ತಿತರಿದ್ದರು.
ರಾಷ್ಟ್ರಪ್ರಶಸ್ತಿ ಗಳಿಸಿರುವ ಒಂದಲ್ಲಾ ಎರಡಲ್ಲ ನಿರ್ದೇಶಕ ಸತ್ಯಪ್ರಕಾಶ್, ನಿರ್ಮಾಪಕ ಉಮಾಪತಿ, ಬಾಲಕಲಾವಿದ ರೋಹಿತ್, ನಟ, ನಿರ್ದೇಶಕ ರಿಶಬ್ಶೆಟ್ಟಿ, ಕೆಜಿಎಫ್ ನಿರ್ಮಾಪಕರ ಪರವಾಗಿ ಚಿದಾನಂದ, ಸಾಹಸ ನಿರ್ದೇಶಕರುಗಳಾದ ಅನ್ಬುಅರಿವು ಮುಂತಾದವರು ಗೌರವವನ್ನು ಸ್ವೀಕರಿಸಿದರು.