ರೈತರಿಗೆ 242.33 ಕೋಟಿ ರೂ. ಪರಿಹಾರ: ಸಚಿವ ಸೋಮಣ್ಣ

ಗದಗ: ರಾಜ್ಯದ ವಿವಿಧ ನದಿಗಳಿಗೆ ಹೊರ ರಾಜ್ಯದಿಂದ ಹರಿದ ನೀರು, ಭಾರಿ ಮಳೆಯಿಂದಾಗಿ ರಾಜ್ಯದ ಆಣೆಕಟ್ಟು, ಕೆರೆಕಟ್ಟೆಗಳು ತುಂಬಿ ಹರಿದು ನೆರೆ ಪರಿಸ್ಥಿತಿಯಿಂದ 22 ಜಿಲ್ಲೆಗಳ 103 ತಾಲೂಕುಗಳ ಲಕ್ಷಾಂತರ ಜನರು ಸಂತ್ರಸ್ತರಾಗಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೃದಯವಂತಿಕೆ ಹಾಗೂ ಪರಿಸ್ಥಿತಿಗನುಗುಣಾಧಾರ ನಿರ್ಧಾರಗಳಿಂದ ನೆರೆ ಸಂತ್ರಸ್ತರ ಹಾನಿಗೆ ಅತೀ ಹೆಚ್ಚಿನ ಪರಿಹಾರ ಒದಗಿಸಲು ಸಾಧ್ಯವಾಗಿದೆ. ತೋಟಗಾರಿಕೆ 1.10 ಲಕ್ಷ ಹೆ. ಬೆಳೆ ಹಾನಿಗಾಗಿ ಒಟ್ಟು 242.33 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ರಾಜ್ಯದ ವಸತಿ,ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಸಚಿವರಾದ ವಿ.ಸೋಮಣ್ಣ ನುಡಿದರು.

ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ನೆರೆ ಕುರಿತು ಅಧಿಕಾರಿಗಳ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆಯ 800 ಗ್ರಾಮಗಳು, 1.40 ಲಕ್ಷ ಜನ, 1.10 ಲಕ್ಷ ಜಾನುವಾರುಗಳು, ಬಾಗಲಕೋಟೆಯ 295 ಗ್ರಾಮಗಳು ನೆರೆ ಹಾನಿ ಪೀಡಿತವಾಗಿವೆ. ಗದಗ ಜಿಲ್ಲೆಯಲ್ಲೂ ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರ ಜನಪ್ರತಿನಿಧಿಗಳ ಸಹಯೋಗದಲ್ಲಿ ಉತ್ತಮ ಕೆಲಸ ಮಾಡಿದ್ದು ಅದಕ್ಕಾಗಿ ಅಭಿನಂದಿಸುವುದಾಗಿ ಸಚಿವ ಸೋಮಣ್ಣ ನುಡಿದರು.

ತೋಟಗಾರಿಕೆ: ನೆರೆಯಿಂದಾಗಿ ರಾಜ್ಯದ ಒಟ್ಟು 1.10 ಲಕ್ಷ ಹೆ. ತೋಟಗಾರಿಕೆ ಬೆಳೆ ನಾಶವಾಗಿದೆ. ವಿಪತ್ತು ನಿರ್ವಹಣೆ ಪಾಲು 132 ಕೋಟಿ ರೂ. ಹಾಗೂ ರಾಜ್ಯ ಸಕರ್ಾರ 110.23 ಕೋಟಿ ರೂ. ಸೇರಿದಂತೆ ಒಟ್ಟು 242.33 ಕೋಟಿ ರೂ. ತೋಟಗಾರಿಕೆ ಬೆಳೆ ಹಾನಿ ಪರಿಹಾರವಾಗಿ ಬಿಡುಗಡೆ ಮಾಡಲಾಗಿದೆ.

ಜಿಲ್ಲೆ: ಪ್ರಮುಖವಾಗಿ ಧಾರವಾಡ(38.568 ಹೆ.), ಹಾವೇರಿ(14.995 ಹೆ.), ಶಿವಮೊಗ್ಗ(14.650 ಹೆ), ಹಾಸನ(7564 ಹೆ.), ಚಿಕ್ಕಮಗಳೂರು(5871 ಹೆ), ಬಾಗಲಕೋಟೆ(5528 ಹೆ), ಬೆಳಗಾವಿ(4578 ಹೆ), ಉತ್ತರಕನ್ನಡ(3076 ಹೆ) ಹಾಗೂ ಗದಗ ಜಿಲ್ಲೆಯಲ್ಲಿ 2921 ಹೆ.ನಲ್ಲಿ ತೋಟಗಾರಿಕೆ ಬೆಳೆಹಾನಿಯಾಗಿದೆ.

ಹಾನಿಗೊಳಗಾದ ಬೆಳೆ ಪ್ರದೇಶ: ಮೆಣಸಿನಕಾಯಿ 25,891 ಹೆ. ಈರುಳ್ಳಿ 23,374 ಹೆ. ಆಲೂಗಡ್ಡೆ 6145 ಹೆ. ಬಾಳೆ 3996 ಹೆ. ಶುಂಠಿ 3184 ಹೆ. ಬೆಳ್ಳುಳ್ಳಿ 1290 ಹೆ. ಟೊಮೆಟೋ 1344 ಹೆ. ಅಲ್ಲದೇ ವಾಷರ್ಿಕ ಬೆಳೆ ಅಡಿಕೆ 22,458 ಹೆ. ಕಾಳುಮೆಣಸು 11,501 ಹೆ. ದಾಳಿಂಬೆ 1077 ಹೆ. ತೆಂಗು 303 ಹೆ. ವೀಳ್ಯದೆಲೆ 535 ಹೆ. ಸೀಬೆ(ಪೇರಲ) 372 ಹೆ. ಗಳಷ್ಟು ಹಾನಿಗೊಳಗಾಗಿದೆ.

ಜಿಲ್ಲಾವಾರು ಪರಿಹಾರ ಮೊತ್ತ: ರಾಷ್ಟ್ರೀಯ ವಿಪತ್ತು ನಿರ್ವಹಣೆ ಮಾರ್ಗಸೂಚಿ ಅನ್ವಯ ಬೆಳಗಾವಿ ಜಿಲ್ಲೆಗೆ 5.48 ಕೋಟಿ, ಬಾಗಲಕೋಟಿ 7.54 ಕೋಟಿ ರೂ, ಗದಗ 3.83 ಕೋಟಿ, ಹಾವೇರಿ 18.95 ಕೋಟಿ ರೂ, ಧಾರವಾಡ 26.26 ಕೋಟಿ ರೂ, ಶಿವಮೊಗ್ಗ 25.28 ಕೋಟಿ ರೂ, ಹಾಸನ 8.84 ಕೋಟಿ ರೂ, ಚಿಕ್ಕಮಗಳೂರು 10,54 ಕೋಟಿ ರೂ, ಕೊಡಗು 16.81 ಕೋಟಿ ರೂ, ದಕ್ಷಿಣಕನ್ನಡ 1.06 ಕೋಟಿ ರೂ, ಉತ್ತರಕನ್ನಡ 5.48 ಕೋಟಿ ರೂ, ಮೈಸೂರು 1.59 ಕೋಟಿ ರೂ. ಸೇರಿದಂತೆ ಒಟ್ಟಾರೆ 22 ಜಿಲ್ಲೆಗಳ 13280 ಕೋಟಿ ರೂ. ಪರಿಹಾರವನ್ನು  ಇದಕ್ಕೆ ರಾಜ್ಯ ಸಕರ್ಾರದ ಪಾಲು 110.23 ಕೋಟಿ ಸೇರಿದಂತೆ ಒಟ್ಟು 242.33 ಕೋಟಿ ರೂ.ಗಳನ್ನು ತೋಟಗಾರಿಕೆ ಬೆೆಳೆ ಹಾನಿ ಪರಿಹಾರವಾಗಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಸೋಮಣ್ಣ ವಿವರ ನೀಡಿದರು. 

     ಸಭೆಯಲ್ಲಿ  ರಾಜ್ಯದ ಗಣಿ, ಭೂ ವಿಜ್ಞಾನ, ಅರಣ್ಯ, ಪರಿಸರ ಜೀವಿಶಾಸ್ತ್ರ ಸಚಿವರು ಹಾಗೂ   ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು  ಶಾಸಕರಾದ  ಕಳಕಪ್ಪ ಬಂಡಿ,  ರಾಮಣ್ಣ ಲಮಾಣಿ, ಗದಗ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ,  ಗದಗ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ,  ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ,  ವಸತಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.