ರಾಣೇಬೆನ್ನೂರು18: ಆಧುನಿಕ ತಂತ್ರಜ್ಞಾನದ ವ್ಯವಸ್ಥೆಯಲ್ಲಿ ನಮ್ಮ ಯುವಕರ ಬದುಕು ಹಾಳಾಗುತ್ತಲಿದೆ. ಅವಶ್ಯಕತೆಯ ಬಳಕೆಗಿಂತ ಅನಾವಶ್ಯಕತೆಯ ಬಳಕೆಯು ಹೆಚ್ಚಾಗುತ್ತಿರುವ ಪರಿಣಾಮ ಯುವ-ಸಮುದಾಯ ಲಂಗುಲಗಾಮಿಲ್ಲದೇ, ಹಾದಿ ತಪ್ಪುತ್ತಲಿದೆ. ಇದೇ ರೀತಿ ಸಾಗಿದರೆ, ಯುವಕರ ಭವಿಷ್ಯ ಅಭದ್ರವಾಗಲಿದೆ. ಪಾಲಕರು ಎಚ್ಚೇತ್ತುಕೊಂಡು ಮಕ್ಕಳ ಭವಿಷ್ಯವನು ಉತ್ತಮಗೊಳಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಹೊನ್ನಾಳಿ ಹಿರೇಕಲ್ಮಠದ ಡಾ|| ಒಡೆಯರ ಚನ್ನಮಲ್ಲಿಕಾಜರ್ುನ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಇಲ್ಲಿನ ಮೃತ್ಯುಂಜಯ ನಗರದ ಚನ್ನೇಶ್ವರ ಮಠದಲ್ಲಿ ಶ್ರೀ ಚನ್ನಮಲ್ಲಿಕಾಜರ್ುನ ಸಂಸ್ಕೃತಿ ಪ್ರಸಾರ ಪರಿಷತ್ತು ಆಯೋಜಿಸಿದ್ದ, 224ನೇ ಜ್ಞಾನವಾಹಿನಿ ಮಾಸಿಕ ಧರ್ಮ ಜಾಗೃತಿ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಮನುಷ್ಯನ ಆಸೆಗೆ ಮಿತಿ ಇಲ್ಲ. ಎಷ್ಟಿದ್ದರೂ ಇನ್ನೂ ಇರಬೇಕು ಎನ್ನುವ ವಾಂಛೆ ಹೆಚ್ಚಾಗಿದೆ. ಪರಿಣಾಮ ಬದುಕಿನಲ್ಲಿ ಮಾನಸಿಕ ಶಾಂತಿ-ನೆಮ್ಮದಿ ಇಲ್ಲದೇ, ತೊಳಲಾಡುತ್ತಿದ್ದಾನೆ. ಶಾಂತಿ-ನೆಮ್ಮದಿಗೆ ಧರ್ಮದ ಅನುಯಾಯಿಗಳಾಗಿ ಆಚರಣೆಯ ಮೂಲಕ ದಾನ-ಧರ್ಮ ಪರೋಪಕಾರ ಬದುಕಿನಲ್ಲಿ ಅಳವಡಿಸಿಕೊಂಡು ಸಾಗಬೇಕಾದ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಈಶ್ವರಿಯ ವಿಶ್ವವಿದ್ಯಾಲಯದ ಬಿ.ಕೆ.ಮಾಲತೀಜಿ ಅಕ್ಕ, ಲಕ್ಷ್ಮೇಶ್ವರದ ಕರೇವಾಡಿಮಠದ ಸಂಶೋಧಕ ವಿದ್ಯಾಥರ್ಿ ಮಂಜುನಾಥಯ್ಯ ದೇವರು, ಕಾಂತರಾಜ್, ವೀರೇಶ್ ಬಡಿಗೇರ, ಮೌನೇಶ್ ತ್ರಾಸದ್, ರಜನಿ ಕರಿಗಾರ, ಅನುಸೂಯಾ ರಾಠೋಡ, ನಿಂಗಪ್ಪ ವಿಭೂತಿ, ಗಣಪ್ಪ ಕುಲಕಣರ್ಿ, ಉಷಾ ಪಾಂಡುರಂಗಿ, ವೀಣಾ ಕಾಮಟೆ ಮೊದಲಾದವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ವಾಗೀಶ ಗುತ್ತಲಮಠದ, ಗೌರಿ ನೆಗಳೂರಮಠ, ಮಂಜುನಾಥ ಪಾಟೀಲ, ಕಮಲಮ್ಮ ಹಿರೇಮಠ, ರೇಖಾ ಮಳೆಮಠ, ರಾಜಶೇಖರಪ್ಪ ಪಟ್ಟಣಶೆಟ್ಟಿ, ಗಾಯಿತ್ರಮ್ಮ ಕುರವತ್ತಿ, ವಿರೂಪಾಕ್ಷಪ್ಪ ಹಳ್ಳಳ್ಳಿ, ಭಾಗ್ಯಶ್ರೀ ಗುಂಡಗಟ್ಟಿ, ಅ.ಸಿ.ಹಿರೇಮಠ, ವ್ಹಿ.ವ್ಹಿ. ಹರಪನಹಳ್ಳಿ, ಕಸ್ತೂರಿ ಪಾಟೀಲ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.