ಹಾಸನದಲ್ಲಿ ಹೊಸ 21 ಪ್ರಕರಣ ಪತ್ತೆ; ಸೋಂಕಿತರ ಸಂಖ್ಯೆ 54ಕ್ಕೆ ಏರಿಕೆ

ಹಾಸನ, ಮೇ 20, ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಪ್ರಮಾಣದಲ್ಲಿ ದೊಡ್ಡ  ಏರಿಕೆ ಕಂಡಿದ್ದು ಇಂದು 21 ಮಂದಿಯಲ್ಲಿ ಕೋವಿಡ್‌19 ಪತ್ತೆ ಯಾಗಿದೆ.ಮಹಾರಾಷ್ಟ್ರ ದಿಂದ‌ ಬಂದವಲ್ಲಿ ಹೆಚ್ಚಾಗಿ  ಸೋಂಕು ಪತ್ತೆ ಯಾಗುತ್ತಿದ್ದು ಒಟ್ಟಾರೆ ಸಂಖ್ಯೆ 54ಕ್ಕೆ ಏರಿದೆ.ಕಳೆದ ವಾರ ಗ್ರೀನ್ ಝೋನ್‌ನಲ್ಲಿದ್ದ ಹಾಸನದಲ್ಲಿ ಏಕಾಏಕಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ದಾಖಲಾದ ಎಲ್ಲಾ ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರಿಗೆ ಸಂಬಂಧಿಸಿದ್ದಾಗಿದ್ದು, ಎಲ್ಲರನ್ನೂ ಕ್ವಾರಂಟೈನ್‌ನಲ್ಲಿ ಇರಿಸಿರುವುದರಿಂದ ಸೋಂಕು ಹರಡಿಲ್ಲ.