ಚೆನ್ನೈ, ಜ 24, ವಿಶ್ವದ 46ನೇ ಶ್ರೇಯಾಂಕಿತ ಶುಭಾಂಕರ್ ಡೇ ಅವರು ಅದ್ಭುತ ಪ್ರದರ್ಶನನದ ನೆರವಿನಿಂದ ಅವಾದ್ ವಾರಿಯರ್ಸ್ ತಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯ ಪಂದ್ಯದಲ್ಲಿ ನಾರ್ಥ್ ಈಸ್ಟರ್ನ್ ವಾರಿಯರ್ಸ್ ವಿರುದ್ಧ 4-3 ಅಂತರದಲ್ಲಿ ಗೆಲುವು ಸಾಧಿಸಿತು.ಉಭಯ ತಂಡಗಳು 3-3 ಸಮಬಲ ಸಾಧಿಸಿದ್ದವು. ಹಾಗಾಗಿ, ಗುರುವಾರ ಸಂಜೆ ಅಂತಿಮ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಶುಭಾಂಕರ್ ಡೇ ಮತ್ತು ತಾನೊಂಗ್‌ಸಾಕ್ ಸಾನ್ಸೊಂಬೂನ್‌ಸುಕ್ ನಡುವಿನ ಪುರುಷರ ಸಿಂಗಲ್ಸ್ ಪಂದ್ಯ ನಡೆಸಲಾಯಿತು.
ಕಳೆದ ವರ್ಷ ಮಲೇಷ್ಯಾ ಮಾಸ್ಟರ್ಸ್ ನಲ್ಲಿ ಸೋಲು ಅನುಭವಿಸಿದ್ದ ಶುಭಾಂಕರ್ ಡೇ, 15-9, 15-13 ಅಂತರದಲ್ಲಿನ ಗೆಲುವನ್ನು ಅವಾದ್ ವಾರಿಯರ್ಸ್ ತಂಡಕ್ಕೆ ಕೊಡುಗೆಯಾಗಿ ನೀಡಿದರು. ವಿಶ್ವದ 18ನೇ ಶ್ರೇಯಾಂಕಿತ ಲೀ ಚಿಯಾಕ್ ಅವರು ಗೆಲುವಿನ ಲಯ ಮುಂದುವರಿಸಿದ್ದಾರೆ. ಇಂಡೋನೇಷ್ಯಾ ಮಾಸ್ಟರ್ಸ್ ಫೈನಲ್ಸ್ ತಲುಪಿದ್ದ ಅದೇ ವಿಶ್ವಾಸದಲ್ಲಿದ್ದ ಲೀ, ಮತ್ತೊಂದು ಪಂದ್ಯದಲ್ಲಿ ನಾರ್ಥ್ ಈಸ್ಟರ್ನ್ ವಾರಿಯರ್ಸ್ ತಂಡಕ್ಕೆ ಎರಡನೇ ಗೆಲುವು ತಂದುಕೊಟ್ಟರು.