ರಾಣೇಬೆನ್ನೂರು: ಮೇ.18: ಕೊರೊನಾ ವೈರಸ್ ಕೋವಿಡ್-19 ಮುಖ್ಯಮಂತ್ರಿಗಳ ಪರಿಹಾರ ನಿಧಿಗಾಗಿ ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸಂತೋಷ ಗುರೂಜೀ ಅವರು ಸೋಮವಾರ ಹಾವೇರಿ ಜಿಲ್ಲಾ ಕೇಂದ್ರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಕೃಷ್ಣಾ ಭಾಜಪೇಯಿ ಅವರಿಗೆ ದೇವಸ್ಥಾನ ಕಮಿಟಿ ವತಿಯಿಂದ 2ಲಕ್ಷ ರೂ.ಗಳ ಚಕ್ಕನ್ನು ಸಮಪರ್ಿಸಿದರು.
ದೇವಸ್ಥಾನ ಕಮಿಟಿ ಚೇರಮನ್ ಎಂ.ಎಂ.ಸತಗಿ, ಸ್ಥಳೀಯ ಸಮಿತಿಯ ಸದಸ್ಯರಾದ ನಿಂಗಪ್ಪ ಮುದ್ದಿ, ಪ್ರಭಾರ ಕಾರ್ಯನಿವರ್ಾಹಕ ಅಧಿಕಾರಿ ಶೇಕಪ್ಪ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.