2.53 ಕೋಟಿರೂ ನಿಷೇಧಿತ ಗುಟ್ಕಾ ವಶ : ಇಬ್ಬರ ಬಂಧನ

ಥಾಣೆ, ಫೆಬ್ರವರಿ 8, ಮಹಾರಾಷ್ಟ್ರದ  ಭಿವಾಂಡಿ ಪಟ್ಟಣದಲ್ಲಿ 2.53  ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಗುಟ್ಕಾ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ. ಆಹಾರ ಸುರಕ್ಷತೆ ಮತ್ತು ಔಷಧ  ಆಡಳಿತ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಈ ಪ್ರದೇಶದಲ್ಲಿನ  ಗೋದಾಮುಗಳ ಮೇಲೆ ಜಂಟಿಯಾಗಿ  ದಾಳಿ ನಡೆಸಿ ನಿಷೇಧಿತ ಗುಟ್ಕಾವನ್ನು ವಶಪಡಿಸಿಕೊಂಡಿದ್ದಾರೆ. ಅಪರಾಧದಲ್ಲಿ ಭಾಗಿಯಾಗಿದ್ದ ಎಂಟು ಜನರ ಪೈಕಿ ಸದ್ಯ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಫ್‌ಡಿಎ ಥಾಣೆ, ಶಿವಾಜಿ ದೇಸಾಯಿ ಮತ್ತು ಭಿವಾಂಡಿ ವಲಯದ ಡಿಸಿಪಿ ಜಂಟಿ ಆಯುಕ್ತ ರಾಜ್‌ಕುಮಾರ್ ಶಿಂಧೆ ತಿಳಿಸಿದ್ದಾರೆ. ಈ ಸಂಬಂಧ   14 ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಬಂಧಿತರನ್ನು ನಾಗೇಂದ್ರ ಕುಮಾರ್ ಯಾದವ್ (27) ಮತ್ತು ವಿಲಾಸ್ ಮಾಂಡವ್ಕರ್ (28) ಎಂದೂ  ಗುರುತಿಸಲಾಗಿದೆ.