ಮೊದಲನೇ ಟಿ-20 ಪಂದ್ಯ : ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ

ಆಕ್ಲೆಂಡ್, ಜ 24, ಇಲ್ಲಿನ ಈಡನ್ ಪಾರ್ಕ್ ಅಂಗಳದಲ್ಲಿ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಚುಟುಕು ಸರಣಿಯ ಮೊದಲನೇ ಟಿ-20 ಹಣಾಹಣಿಯಲ್ಲಿ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. "ಇಲ್ಲಿನ ಪಿಚ್ ಬ್ಯಾಟಿಂಗ್ ಮಾಡಲು ಉತ್ತಮವಾಗಿದೆ. ಹಾಗಾಗಿ, ಮೊದಲು ನಾವು ಫೀಲ್ಡಿಂಗ್ ಮಾಡುತ್ತೇವೆ. ಸಂಜೆ ಆಗಿರುವುದರಿಂದ ಚೆಂಡನ್ನು ಬೆನ್ನತ್ತುವುದು ಕಷ್ಟವಾಗಬಹುದು. ಪ್ರಯಾಣದ ಹೊರತಾಗಿಯೂ ನಾವು ಉತ್ತಮವಾಗಿದ್ದೇವೆ. 50 ಓವರ್ ಗಳ ಸರಣಿ ಆಡಿದ ಬಳಿಕ ಟಿ-20 ಆಡಲು ನಾವು ಸಿದ್ಧರಿದ್ದೇವೆ,'' ಎಂದು ಟಾಸ್ ಬಳಿಕ ಕೊಹ್ಲಿ ಹೇಳಿದರು."ವಿಭಿನ್ನ ನಿರ್ಣಾಯಕ ಪರಿಸ್ಥಿತಿಗಳಲ್ಲಿ ಚೆಂಡಿನ ಪುಟಿದೇಳುವ ಸ್ವಭಾವ ಹೆಚ್ಚು ಪ್ರಭಾವವಾಗಬಹುದು. ಆದರೆ, ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಬ್ಯಾಟಿಂಗ್ ಮಾಡಬೇಕಾಗುತ್ತದೆ,'' ಎಂದರು.ವಿರಾಟ್ ಕೊಹ್ಲಿ ಹೇಳಿದಂತೆ ಕನ್ನಡಿಗ ಕೆ.ಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಹಾಗಾಗಿ, ಪಂತ್ ಗೆ ಅಂತಿಮ 11ರಲ್ಲಿ ಸ್ಥಾನ ಸಿಕ್ಕಿಲ್ಲ. ಮನೀಷ್ ಪಾಂಡೆ ಐದನೇ ಕ್ರಮಾಂಕದಲ್ಲಿ ಸ್ಥಾನ ಪಡೆದರೆ, ಕುಲ್ದೀಪ್ ಯಾದವ್ ಬದಲು ಯಜುವೇಂದ್ರ ಚಾಹಲ್ ಅಂತಿಮ 11ರಲ್ಲಿ ಕಾಣಿಸಿಕೊಂಡಿದ್ದಾರೆ.

ಅಂತಿಮ 11 ಭಾರತ: ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ (ವಿ.ಕೀ), ವಿರಾಟ್ ಕೊಹ್ಲಿ(ನಾಯಕ), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಶಿವಂ ದುಬೆ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರಿತ್ ಬುಮ್ರಾ, ಯಜ್ವೆಂದ್ರ ಚಾಹಲ್, ಮೊಹಮ್ಮದ್ ಶಮಿ.

ನ್ಯೂಜಿಲೆಂಡ್: ಮಾರ್ಟಿನ್ ಗುಪ್ಟಿಲ್, ಕಾಲಿನ್ ಮನ್ರೋ, ಕೇನ್ ವಿಲಿಯಮ್ಸನ್ (ನಾಯಕ), ಟಿಮ್ ಸೀಫರ್ಟ್ (ವಿ.ಕೀ), ರಾಸ್ ಟೇಲರ್, ಕಾಲಿನ್ ಡಿ ಗ್ರ್ಯಾಂಡ್ಹೋಮ್, ಮಿಚೆಡಲ್ ಸ್ಯಾಂಟ್ನರ್, ಟಿಮ್ ಸೌಥ್, ಇಶ್ ಸೋಧಿ, ಬ್ಲೈರ್ ಟಿಕ್ಕರ್, ಹಮೀಷ ಬೆನೆಟ್.