ರಾಣೇಬೆನ್ನೂರ ನಗರಸಭೆಗೆ 174.25 ಲಕ್ಷ ರೂ ಉಳಿತಾಯದ ಬಜೆಟ್ ಮಂಡನೆ

174.25 lakh rupees saving budget presented to Ranebennur Municipal Council

ರಾಣೇಬೆನ್ನೂರ ನಗರಸಭೆಗೆ 174.25 ಲಕ್ಷ ರೂ ಉಳಿತಾಯದ ಬಜೆಟ್ ಮಂಡನೆ  

ರಾಣೇಬೆನ್ನೂರ 21;  ಸ್ಥಳೀಯ ನಗರಸಭೆಗೆ 2025-26ನೇ ಸಾಲಿಗಾಗಿ 174.25 ಲಕ್ಷ ರೂ(1ಕೋಟಿ 74 ಲಕ್ಷ) ಉಳಿತಾಯದ ಆಯವ್ಯಯವ (ಬಜೆಟ್)ನ್ನು ನಗರಸಭೆ ಅಧ್ಯಕ್ಷೆ ಚಂಪಕ ರಮೇಶ ಬಿಸಲಳ್ಳಿ ಅವರು ನಗರಸಭಾ ಸಭಾಂಗಣದಲ್ಲಿ ನಗರಸಭೆ ಸದಸ್ಯರುಗಳ ಸಮ್ಮುಖದಲ್ಲಿ   ಗುರುವಾರದಂದು ಮಂಡಿಸಿದರು.      ಬಜೆಟ್‌ನ ಪ್ರಾರಂಭಿಕ ಶಿಲ್ಕು 605.17ಲಕ್ಷ ರೂಗಳಷ್ಟಿದ್ದು,  ನೀರೀಕ್ಷಿತ ರಾಜಸ್ವ ಸ್ವೀಕಾರದಿಂದ 3925.35ಲಕ್ಷ ರೂ, ನೀರೀಕ್ಷಿತ ಬಂಡವಾಳದಿಂದ 1141.12ಲಕ್ಷ ರೂ, ನೀರೀಕ್ಷಿತ ಅಸಮಾನ್ಯ ಸ್ವೀಕೃತಿಯಿಂದ 1455.5ಲಕ್ಷ ರೂ ಸೇರಿದಂತೆ ಒಟ್ಟು 6521.97 ನೀರೀಕ್ಷಿತ ಜಮೆಯಿಂದ  ಜಮಾದ ಆದಾಯ ಮೂಲಗಳನ್ನು ನೀರೀಕ್ಷಿಸಲಾಗಿದೆ.        ರಾಜಸ್ವ ಪಾವತಿಯಿಂದ 2937.04ಲಕ್ಷ ರೂ, ಬಂಡವಾಳ ಪಾವತಿಯಿಂದ 2142.24 ನೀರೀಕ್ಷಿತ  ಅಸಮಾನ್ಯ ಪಾವತಿಯಿಂದ  1873.61ಲಕ್ಷ ರೂ ಸೇರಿದಂತೆ ಒಟ್ಟು 6952.89ಲಕ್ಷ ರೂ ಪಾವತಿ ಎಂದು ನೀರೀಕ್ಷಿಸಲಾಗಿದೆ. ಪ್ರಾರಂಭಿಕ ಶಿಲ್ಕು ಸೇರಿ  ಒಟ್ಟು 7127.14ಲಕ್ಷ ರೂ ಜಮಾದ ಆದಾಯ ಮತ್ತು ಒಟ್ಟು 6952.89ಲಕ್ಷ ರೂ ಪಾವತಿ ಎಂದು ನೀರೀಕ್ಷಿಸಲಾಗಿದ್ದು, ಇದರಿಂದ ಈ ಬಾರಿಯ ಬಜೆಟ್ 174.25ಲಕ್ಷ ರೂ ಉಳಿತಾಯದ್ದಾಗಿದೆ ಎಂದರು.    

   ಈ ಬಾರಿ ಆದಾಯದ ಮೂಲಗಳಾದ ಆಸ್ತಿ ತೆರಿಗೆಯಿಂದ 735 ಲಕ್ಷ ರೂ, ಮಳಿಗೆ ಬಾಡಿಗೆಯಿಂದ 410ಲಕ್ಷ ರೂ,  ನೀರಿನ ಕಂದಾಯದಿಂದ 36 ಲಕ್ಷ ರೂ, ಅಭಿವೃದ್ದಿ ಕರದಿಂದ 500 ಲಕ್ಷರೂ, ಎಸ್‌ಎಫ್‌ಸಿ ವೇತನ, ವಿದ್ಯುತ್, ಮುಕ್ತನಿಧಿ ಅನುದಾನದಿಂದ ಒಟ್ಟು ಲಕ್ಷ ರೂ,1000 ಇತರೇರದಿಂದ ಹೆಚ್ಚಿನ ಆದಾಯ ನೀರೀಕ್ಷಿಸಲಾಗಿದೆ ಎಂದರು.    ಪಾವತಿಗಾಗಿ  ರಸ್ತೆ ಅಭಿವೃದ್ದಿಗೆ ಹಾಗೂ ರಸ್ತೆ ಬದಿ ಚರಂಡಿಗೆ 50 ಲಕ್ಷ ರೂ, ಬೀದಿ ದೀಪ ವ್ಯವಸ್ಥೆಗೆ 125 ಲಕ್ಷ ರೂ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ 10ಲಕ್ಷ ರೂ,  ನೀರು ಸರಬರಾಜು ಕಾಮಗಾರಿಗಾಗಿ  170ಲಕ್ಷ ರೂ,     ಉದ್ಯಾನವನಗಳ ಅಭಿವೃದ್ದಿಗೆ 150ಲಕ್ಷ ರೂ, ಮಳಿಗೆ ನಿರ್ಮಾಣಕ್ಕಾಗಿ 150 ಲಕ್ಷ  ರೂ ಸೇರಿದಂತೆ  ಇತರ   ಪಾವತಿ ನೀರೀಕ್ಷಿಸಲಾಗಿದೆ ಎಂದರು.  

ನಗರದ ವಿವಿಧ ವಾರ್ಡ್ಗಳಲ್ಲಿನ ರಸ್ತೆಗಳು ಚರಂಡಿಗಳ ನಿರ್ಮಾಣ ಹಾಗೂ ದುರಸ್ತಿಗಾಗಿ 7.7 ಕೋಟಿ ರೂಗಳನ್ನು, ಕುಡಿಯುವ ನೀರಿಗಾಗಿ 3.95 ಕೋಟಿ ರೂಗಳನ್ನು, ಬೀದಿ ದೀಪಗಳ ವ್ಯವಸ್ಥೆ ಹಾಗೂ ವಾರ್ಷಿಕ ನಿರ್ವಹಣೆಗಾಗಿ 1.45 ಕೋಟಿ ರೂ, ಯುಜಿಡಿಗಾಗಿ 35 ಲಕ್ಷ ರೂ, ನಗರದ ಸೌಂದರ್ಯೀಕರಣಕ್ಕೆ 50 ಲಕ್ಷ ರೂ,   ಸಿಸಿ ಕ್ಯಾಮೆರಾ ಅಳವಡಿಕೆಗೆ 30 ಲಕ್ಷ, ನಗರಸಭೆ ಆಸ್ತಿ ಸಂರಕ್ಷಣೆಗಾಗಿ 20 ಲಕ್ಷ, ನಗರಸಭಾ ಪ್ರೌಢ ಶಾಲಾ ಅಭಿವೃದ್ಧಿಗಾಗಿ 30 ಲಕ್ಷ,   ಮುಕ್ತಿವಾಹನಕ್ಕೆ 20 ಲಕ್ಷ ,ಸ್ಮಶಾನ ಅಭಿವೃದ್ಧಿಗೆ 50 ಲಕ್ಷ, ಉದ್ಯಾನವನಗಳ ಅಭಿವೃದ್ಧಿಗಾಗಿ 3 ಕೋಟಿ, ಅಂಗನವಾಡಿ ಕಟ್ಟಡ, ನಿರ್ಮಾಣ, ದುರಸ್ತಿಗಾಗಿ 20 ಲಕ್ಷ, ವಾಣಿಜ್ಯ ಮಳಿಗೆಗಳ ದುರಸ್ತಿಗಾಗಿ 75 ಲಕ್ಷ ಗಳನ್ನು ಮೀಸಲಿಡಲಾಗಿದೆ ಎಂದರು . ಶಾಸಕ ಪ್ರಕಾಶ ಕೋಳಿವಾಡ, ಉಪಾಧ್ಯಕ್ಷ ನಾಗರಾಜ ಪವಾರ (ಮಣಿ) ಪೌರಾಯುಕ್ತ ಎಫ್ ಐ ಇಂಗಳಗಿ, ಎಇಇ ಎಸ್‌.ಬಿ.ಮರಿಗೌಡ್ರ, ಜಿ.ಎಂ. ವಾಣಿಶ್ರೀ, ಮಧು ಸಾತೇನಹಳ್ಳಿ,  ಅರುಣ ಸೇರಿದಂತೆ   ನಾಮನಿರ್ಧೇಶಿತ ಸದಸ್ಯರು, ಹಾಗೂ ನಗರಸಭಾಸಿಬ್ಬಂದಿಗಳು ಮತ್ತಿತರರು ಇದ್ದರು.      ಸದಸ್ಯರಾದ  ಪುಟ್ಟಪ್ಪ ಮರಿಯಮ್ಮನವರ, ಮಲ್ಲಣ್ಣ ಅಂಗಡಿ,  ನಿಂಗರಾಜ ಕೋಡಿಹಳ್ಳಿ, ಶಶಿಧರ ಬಸೇನಾಯ್ಕರ, ಪ್ರಕಾಶ ಬುರಡಿಕಟ್ಟಿ,  ಮಂಜುಳಾ ಹತ್ತಿ,  ಪ್ರಕಾಶ ಪೂಜಾರ , ಗಂಗಮ್ಮ ಹಾವನೂರ ಸೇರಿದಂತೆ ಮತ್ತಿತರ ಸದಸ್ಯರುಗಳು  ಬಜೆಟ್ ಬಗ್ಗೆ ಪರ- ವಿರೋಧದ ಕುರಿತು  ಪ್ರತಿಕ್ರಿಯಿಸಿದರು.