ವಿಷಪೂರಿತ ಮಲ್ನಾಡ್ ಅವರೆ ಸೊಪ್ಪು ಸೇವಿಸಿದ 17 ಕುರಿ-ಮೇಕೆ ಸಾವು

ಲೋಕದರ್ಶನವರದಿ

ರಾಣೆಬೆನ್ನೂರ. ಜು.10: ವಿಷಪೂರಿತ ಸೊಪ್ಪು (ಮಲ್ನಾಡ ಅವರೆ) ಸೇವಿಸಿ 30 ಕುರಿ ಮತ್ತು ಮೇಕೆಗಳು ಅಸ್ವಸ್ಥವಾಗಿ ಅವುಗಳಲ್ಲಿ 9 ಕುರಿಗಳು ಮತ್ತು 8 ಮೇಕೆಗಳು ಮೃತಪಟ್ಟ ಘಟನೆ ದೇವರಗುಡ್ಡ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

  ದೇವರಗುಡ್ಡ ಗ್ರಾಮದ ಕುರಿಗಾಯಿ ನಿಂಗರಾಜ ಏಳುಕುರಿ ಎಂಬುವವರಿಗೆ ಈ ಕುರಿಗಳು ಸೇರಿದ್ದಾಗಿವೆ ಎಂದು ಗುರುತಿಸಲಾಗಿದೆ. ಎಂದಿನಂತೆ ಕುರಿ ಮತ್ತು ಮೇಕೆಗಳನ್ನು ಮೇಯಿಸಲು ಹೊಡೆದುಕೊಂಡು ಹೋಗಲಾಗಿತ್ತು. ಸಂಜೆ ವೇಳೆಗೆ ಅವುಗಳನ್ನು ದೊಡ್ಡಿಗೆ ತರಲಾಗಿದ್ದು, ತದನಂತರ 30 ಕುರಿ ಮತ್ತು ಮೇಕೆಗಳು ಅಸ್ವಸ್ಥವಾಗಿ ಒದ್ದಾಡುತ್ತಿದ್ದಾಗ ಕುರಿಗಾಯಿ ಅವುಗಳ ಆರೈಕೆ ಮಾಡುತ್ತಿದ್ದಂತೆ 9 ಕುರಿಗಳು ಮತ್ತು 8 ಮೇಕೆಗಳು ಮೃತಪಟ್ಟದ್ದನ್ನು ನೋಡಿದ ಕುರಿಗಾಯಿ ನಿಂಗರಾಜ ಏಳುಕುರಿ ಕಂಗಾಲಾಗಿ ಹೋದರು.

    ತಕ್ಷಣ ಅವರು ಪಶುಸಂಗೋಪನಾ ಇಲಾಖೆಯ ವೈದ್ಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಪಶುವೈದ್ಯ ಡಾ|| ನೀಲಕಂಠ ಅಂಗಡಿ ಮತ್ತು ಡಾ| ನಾಡಿಗೇರ ಘಟನಾ ಸ್ಥಳಕ್ಕೆ ಧಾವಿಸಿ ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಹೆಚ್ಚಿನ ಸಾವು ಸಂಭವಿಸಲಿಲ್ಲ ಎಂದು ಹೇಳಲಾಗಿದೆ.ಪಶುಸಂಗೋಪನಾ ಇಲಾಖೆಯ ಸಹಾಯಕ ನಿದರ್ೇಶಕ ಡಾ| ಬಸವರಾಜ ಬಿ.ಸಿ. ಅವರು. ಸಾಮಾನ್ಯವಾಗಿ ಕುರಿ ಮತ್ತು ಮೇಕೆಗಳು ಯಾವುದೇ ತರಹದ ಸೊಪ್ಪು ಕಂಡ ಕ್ಷಣ ತಿನ್ನುತ್ತವೆ.   ಮಲ್ನಾಡ ಅವರೆ ಸೊಪ್ಪು ಎಳೆಯದಿದ್ದಾಗ ವಿಷಪೂರಿತವಾಗಿರುತ್ತದೆ ಅದನ್ನು ತಿಂದ ಕಾರಣ ಅವುಗಳ ಸಾವಿಗೆ ಕಾರಣವಾಗಿದೆ. ಘಟನೆ ನಡೆದ ತಕ್ಷಣ ವಿಷಯ ತಿಳಿದಿದ್ದರೆ ಇನ್ನೂ ಸಾವಿನ ಪ್ರಮಾಣ ಕಡಿಮೆಯಾಗುತ್ತಿತು ಎಂದು ಲೋಕದರ್ಶನಕ್ಕೆ ತಿಳಿಸಿದರು.