ಔರಂಗಬಾದ್, ಮೇ 23, ಔರಂಗಾಬಾದ್‌ನಲ್ಲಿ ಹೊಸದಾಗಿ ಶನಿವಾರ 17 ಹೊಸ ಕರೊನ ಸೋಂಕು ಪ್ರಕರಣಗಳು ದೃಡಪಟ್ಟಿವೆ ಎಂದು ಜಿಲ್ಲಾಡಳಿತ ಹೆಳಿದೆ. ಪರಿಣಾಮ ಜಿಲ್ಲೆಯಲ್ಲಿ ಈವರೆಗೆ ಸೋಂಕಿತ ಸಂಖ್ಯೆ 1241 ಕ್ಕೆ ಏರಿಕೆಯಾಗಿದೆ. ಹೊಸದಾಗಿ ವರದಿಯಾದ ಪ್ರಕರಣಗಳೆಲ್ಲವೂ ಪುರುಷರೆ ಆಗಿದ್ದಾರೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ 45 ಸಾವುನೋವುಗಳು ವರದಿಯಾಗಿದ್ದು, 570 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗಳಿಗೆ ತೆರಳಿದ್ದಾರೆ .