ಸರ್ ಎಂ.ವ್ಹಿ.ಅವರ 165 ನೇಯ ಜನ್ಮ ದಿನಾಚರಣೆ

ಸರ್ ಎಂ.ವ್ಹಿ.ಅವರ 165 ನೇಯ ಜನ್ಮ ದಿನಾಚರಣೆ 165th Birth Anniversary of Sir M.V.

ಸರ್ ಎಂ.ವ್ಹಿ.ಅವರ 165 ನೇಯ ಜನ್ಮ ದಿನಾಚರಣೆ 

ಬೆಳಗಾವಿ 16: ದಿ. ಇನ್ಸ್ಟಿಟ್ಯೂಷನ್ ಆಫ್ ಇಂಜೀನೀಯರ್ಸ ಸ್ಥಾನಿಕ ಸಂಸ್ಥೆ, ಬೆಳಗಾವಿಯಲ್ಲಿ ಸರ್ ಎಂ.ವ್ಹಿ.ಅವರ 165 ನೇಯ ಜನ್ಮ ದಿನಾಚರಣೆಯ ಅಂಗವಾಗಿ 58 ನೇಯ “ಇಂಜೀನೀಯರುಗಳ ದಿನ”ವನ್ನು ಆಚರಿಸಲಾಯಿತು.  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜೇಂದ್ರ ಬೆಳಗಾಂಕರ, ಚೇರಮನ್ ಕೆ.ಎಲ್‌.ಎಸ್, ಜಿ.ಐ.ಟಿ. ಇವರು, ಭಾರತವು ಮೂರನೆಯ ಆರ್ಥಿಕ ಬಲಿಷ್ಠ ರಾಷ್ಟ್ರವಾಗುವಲ್ಲಿ ಸಾಗುತ್ತಿರುವ ಕುರಿತು ಮಾತನಾಡಿದರು.   

ವಿಶೇಷ ಉಪನ್ಯಾಸಕರಾಗಿ ಆಗಮಿಸದ್ದ ಧಾರವಾಡ ಐ.ಐ.ಟಿ.ಯ ಪ್ರಾಧ್ಯಾಪಕರಾದ ಡಾ.ಆರ್‌.ಪ್ರಭು ಇವರು ನಿಗದಿತ ವಿಷಯ “ಡೀಪ್ ಟೆಕ್ ಮತ್ತು ಇಂಜೀನೀಯರಿಂಗ್ ಎಕ್ಸಲೆನ್ಸ್‌-ಡ್ರೈವಿಂಗ್ ಇಂಡಿಯಾಸ್ ಟೆಕೆಡ್‌” ವಿಷಯದ ಕುರಿತು ಮಾತನಾಡಿದರು.  ಈ ಸಂದರ್ಭದಲ್ಲಿ ವಿಶೇಷ ಸಾಧನಗೈದ ಇಂಜೀನೀಯರುಗಳಾದ ಡಾ.ರಘುರಾಜ ಕೆ.ರಾವ್, ಎಂ.ಡಿ. ಅಕ್ಸಾಟೆಕ್ ಹಾಗೂ ಶ್ರೀ ಸಂಜೀವಕುಮಾರ ಹುಲಕಾಯಿ ಅಧೀಕ್ಷಕ ಅಭಿಯಂತರರು ಲೋಕೋಪಯೋಗಿ ಇಲಾಖೆ, ಬೆಳಗಾವಿ ಇವರನ್ನು ಸನ್ಮಾನಿಸಲಾಯಿತು.    

ನಿವೃತ್ತ ಮು.ಇಂ. .ಎಸ್‌.ಎಸ್‌.ಖಣಗಾವಿ ಇವರು ಅಧ್ಯಕ್ಷತೆ ವಹಿಸಿದ್ದರು.  ಡಾ. ಬಿ. ವೆಂಕಟೇಶ ಗೌರವ ಕಾರ್ಯದರ್ಶಿಗಳು ಸ್ವಾಗತಿಸಿದರು.  ಬಿ.ಜಿ.ಧರೆಣ್ಣಿ, ಸಿ.ಬಿ.ಹಿರೇಮಠ ಅತಿಥಿ ಪರಿಚಯ ಮಾಡಿದರು.  ಪೂರ್ಣಿಮಾ ಚರಂತಿಮಠ ಸರ್‌. ಎಂ.ವ್ಹಿ. ಬಗೆಗೆ ಮಾತನಾಡಿದರು.  ಪ್ರೋ. ಮಂಜುನಾಥ ವಂದನಾರೆ​‍್ಣ ಸಲ್ಲಿಸಿದರು. ವಿಲಾಸ ಬದಾಮಿ, ಎಚ್‌.ಸುರೇಶ,  ಎಸ್‌.ಎಸ್‌.ಸಬರದ, ಎಸ್‌.ಎಮ್‌.ಮೇಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.