ಶಿಕ್ಷಕಿ ಸುವರ್ಣ ಬಿರಾದಾರ್ಗೆ ಆತ್ಮೀಯ ಬೀಳ್ಕೊಡುಗೆ

ಶಿಕ್ಷಕಿ ಸುವರ್ಣ ಬಿರಾದಾರ್ಗೆ ಆತ್ಮೀಯ ಬೀಳ್ಕೊಡುಗೆ  Warm farewell to teacher Suvarna Biradar

ಮುಂಡಗೋಡ 5: ತಾಲೂಕಿನ ಸನವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಯಾದ ಶಿಕ್ಷಕಿ ಸುವರ್ಣ ಬಿರಾದಾರ್ ಅವರಿಗೆ ಶನಿವಾರ ಶಾಲೆಯಲ್ಲಿ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.  ಎಸ್ಡಿಎಂಸಿ ಅಧ್ಯಕ್ಷ ರಾಜು ಗುಬ್ಬಕ್ಕನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಮಧು ಕೇರಿಹೊಲದವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೆ.ಕೆ. ಕರುವಿನಕೊಪ್ಪ, ಸಿಆರ​‍್ಿ ಪ್ರಕಾಶ ಬಾಳಮ್ಮನವರ, ಎಸ್ಡಿಎಂಸಿ ಸದಸ್ಯರಾದ ದಿನೇಶ್ ಕೇರಿಹೊಳದವರ, ಪ್ರಕಾಶ ಕ್ಯಾಮಣಕೇರಿ, ಪರಶುರಾಮ ಶೇರವಾಡ, ಗೌರೀಶ ಪೂಜಾರ, ಕವಿತಾ ಬಾಳಮ್ಮನವರ, ಪ್ರಭಾರ ಮುಖ್ಯ ಶಿಕ್ಷಕ ದೇವೇಂದ್ರ​‍್ಪ ದೊಡ್ಡಗೌಡ್ರ, ಸಹ ಶಿಕ್ಷಕಿಯರಾದ ನೇತ್ರಾವತಿ ಗೌಡ ಹಾಗೂ ಶಕುಂತಲಾ ಬಿಸಗಣ್ಣವರ ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಶಿಕ್ಷಕಿ ಸುವರ್ಣ ಬಿರಾದಾರ್ ಅವರನ್ನು ಸನ್ಮಾನಿಸಿ, ಮುಂದಿನ ಸೇವಾ ಜೀವನಕ್ಕೆ ಶುಭ ಹಾರೈಸಲಾಯಿತು.