ತಾಳಿಕೋಟಿ 20: ತಾಲೂಕಿನ ಬಿಳೆಭಾವಿ ಗ್ರಾಮದಲ್ಲಿ ಗುರುವಾರ ಶ್ರೀ ಶ್ರೀ ಶ್ರೀ ವಿದ್ಯಾನಿಧಿ ತೀರ್ಥ ಶ್ರೀಪಾದಂಗಳವರ 160 ನೇ ಆರಾಧನೆ ನಡೆಯಿತು.
ಮುಂಜಾನೆ ಕಾಕಡಾರತಿ ಮಾಡುವದರೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ತಾಳಿಕೋಟೆ ಶ್ರೀ ಮಹಾಲಕ್ಶ್ಮೀ, ಗಾಯತ್ರಿ ಭಜನಾ ಮಂಡಳಿ ಮತ್ತು ವಿಜಯಪುರದ ಶ್ರೀಪರ್ನಿಕಾ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ನಂತರ ಕೀರ್ತನೆ ಸೇವೆ, ಕೀರ್ತನ ಕೇಸರಿ ಶ್ರೀ ಶಂಕರರಾವ ಅನಂತಪುರ ವಿಜಯಪುರ ಇವರಿಂದ ನೆರವೇರಿತು, ಗುರುಶಿಷ್ಯ ಪರಂಪರೆ, ಕಾಣ್ವ ಶಾಖೆ ಸ್ಥಾಪನೆ, ಪಾರಮಾರ್ಥ ಸಾಧನೆ ಹೇಗೆ, ಸಂಸ್ಕಾರ ಎಂದರೇನು? ಎನ್ನುವದರ ಬಗ್ಗೆ ತಿಳಿಸಿದರು. 3 ಗುಣಗಳಾದ ತಾಮೊಗುಣ, ರಜೋಗುಣ, ಸತ್ವಗುಣ ಇವಗಳ ಬಗ್ಗೆ ವಿವರಿಸಿದರು. ನಂತರ ಶ್ರೀಯಾ ದೇಶಪಾಂಡೆ ಇವರಿಂದ ಭಾರತನಾಟ್ಯ ನೆರವೇರಿತು.
ಕೊನೆಗೆ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷಿಯ ಅಭ್ಯರ್ಥಿ ರಘುನಾಥ ಜಿ ಇವರು ಗುರುಗಳ ದರ್ಶನ ಪಡೆದರು, ತದನಂತರ ಹಲವಾರು ದಾನಿಗಳಿಗೆ ಮತ್ತು ಸಾಧಕರಿಗೆ ಸನ್ಮಾನ ನಡೆಯಿತು. ಕೊನೆಗೆ ಮಹಾಪ್ರಸಾದ ನಡೆಯಿತು.