ಜೆರುಸಲೇಂ, ಮೇ 18,ಇಸ್ರೇಲ್ ನಲ್ಲಿ 16,617 ಜನರಲ್ಲಿ ಕೊರೊನಾ ವೈರಾಣು ಸೋಂಕು ದೃಢಪಟ್ಟಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.ಇಸ್ರೇಲ್ ನಲ್ಲಿ ಕೋವಿಡ್ – 19 ರಿಂದ ಮೃತಪಟ್ಟವರ ಸಂಖ್ಯೆ 272 ಕ್ಕೆ ಏರಿಕೆಯಾಗಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದವರ ಸಂಖ್ಯೆ 59 ರಿಂದ 55 ಕ್ಕೆ ಇಳಿಕೆಯಾಗಿದೆ. ಒಟ್ಟು 177 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಭಾನುವಾರ 87 ಜನರು ಗುಣಮುಖರಾಗಿದ್ದು ಒಟ್ಟು 12,942 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು ಸದ್ಯ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ 3.403 ಕ್ಕೆ ಇಳಿಕೆಯಾಗಿದೆ.ಭಾನುವಾರದಿಂದ ನಾಲ್ಕರಿಂದ ಹತ್ತನೇ ತರಗತಿಗಳಿಗೆ ಶಾಲೆಗಳು ಪುನರಾರಂಭವಾಗಿದ್ದು ಮಂಗಳವಾರದ ವೇಳೆಗೆ ಎಲ್ಲಾ ಶಾಲೆಗಳಲ್ಲಿ ಎಲ್ಲ ಮಕ್ಕಳು ಹಾಜರಾಗುವ ನಿರೀಕ್ಷೆ ಇದೆ. ಒಂದರಿಂದ ಮೂರನೇ ತರಗತಿ ಮತ್ತು 11 ಮತ್ತು 12 ನೇ ತರಗತಿಗಳ ಬೋಧನಾ ತರಗತಿಗಳು ಈಗಾಗಲೇ ಆರಂಭವಾಗಿವೆ.